Monday, October 5, 2026

BDA Apartments

Contact BDA JK_Adv BDA Adv
Home Uncategorized ಕೋವಿಡ್ ಲಸಿಕೆ ಮಾರ್ಗಸೂಚಿ: ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರಕಾರ

ಕೋವಿಡ್ ಲಸಿಕೆ ಮಾರ್ಗಸೂಚಿ: ಸರಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರಕಾರ

ಬೆಂಗಳೂರು, ಮೇ 23, 2021 (www.justkannada.in): ಸರಕಾರಿ ನೌಕರರು ಕೋವಿಡ್ ಲಸಿಕೆ ಪಡೆಯುವ ಸಂಬಂಧ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಹೌದು.  ಸರ್ಕಾರಿ, ಖಾಸಗಿ ನೌಕರರ ಕುಟುಂಬಕ್ಕೂ ಕೋವಿಡ್ ಲಸಿಕೆ ನೀಡುವ ಕುರಿತಂತೆ ಪರಿಷ್ಕೃತ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಸರ್ಕಾರಿ ಮತ್ತು ಖಾಸಗಿ ನೌಕರರ ಕುಟುಂಬ ಸದಸ್ಯರು ಕಚೇರಿ ವತಿಯಿಂದ ನಡೆಸಲಾಗುವ ಲಸಿಕೆ ಶಿಬಿರಗಳಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ತಿಳಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸರ್ಕಾರಿ ನೌಕರರ ಕುಟುಂಬದವರು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಕುಟುಂಬದವರು ಕೂಡ ಲಸಿಕೆ ಪಡೆಯಬಹುದಾಗಿದೆ ಎನ್ನಲಾಗಿದೆ.