Friday, August 14, 2026

BDA Apartments

Home Front Page ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜನರೇಟರ್ ಸ್ಪೋಟ

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಜನರೇಟರ್ ಸ್ಪೋಟ

ಮೈಸೂರು, ಮೇ 23, 2021 (www.justkannada.in): ಮೈಸೂರಿನ‌  ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ‌ಜನರೇಟರ್ ಸ್ಪೋಟಗೊಂಡಿದೆ.

ಇದ್ದಕ್ಕಿದ್ದಂತೆ ಸ್ಪೋಟಗೊಂಡು ಸಿಡಿದಿರುವ ಜನರೇಟರ್ ನಿಂದಾಗಿ ಅಕ್ಕಪಕ್ಕ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಮೈಸೂರಿನ ಜಿ.ಪಂ ಕಚೇರಿ ಆವರಣದಲ್ಲಿ ಪ್ರತ್ಯೇಕವಾಗಿದ್ದ ಜನರೇಟರ್ ರೂಂನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಜನರೇಟರ್ ಸ್ಪೋಟಗೊಂಡಿರಬಹುದು ಎನ್ನಲಾಗಿದೆ.

ಇಡೀ ಕೋಣೆಯ ತುಂಬೇಲ್ಲ ಪಟಾಕಿ ಸಿಡಿದಂತೆ ಬೆಂಕಿ ಸಿಡಿದಿದೆ. ತಕ್ಷಣ ಸ್ಥಳಕ್ಕಾಗಿ ಬೆಂಕಿ ನಂದಿಸಿದ ಅಗ್ನಿ‌ಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರಿಪೇರಿ ಆರಂಭಿಸಲಾಗಿದೆ. ಜನರೇಟರ್ ಸ್ಪೋಟದಿಂದ ದಟ್ಟ ಹೊಗೆ ಆವರಿಸಿಕೊಂಡ ಪರಿಣಾಮ ಸ್ಥಳದಲ್ಲಿ ಕೆಲ ಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.