Monday, October 5, 2026

BDA Apartments

Home Front Page ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗೆ ಆಗ್ರಹ: ಬೃಹತ್ ಪ್ರತಿಭಟನೆ

ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರ್ಪಡೆ ತಡೆಗೆ ಆಗ್ರಹ: ಬೃಹತ್ ಪ್ರತಿಭಟನೆ

ಮೈಸೂರು,ಅಕ್ಟೋಬರ್,5,2026 (www.justkannada.in): ಚಾಮುಂಡಿ ಬೆಟ್ಟದ ತಪ್ಪಲಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ (ಪೊಲೀಸ್ ಬಡಾವಣೆ) ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರ ಜೊತೆಗೆ, ಐತಿಹಾಸಿಕ ತಿಪ್ಪಯ್ಯನ ಕೆರೆಗೆ ಕಲುಷಿತ ಒಳಚರಂಡಿ ನೀರು ಸೇರುವುದನ್ನು ತಡೆದು ಕೆರೆಯನ್ನು ಸಂರಕ್ಷಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟಿಸಿದರು.

ಬಡಾವಣೆಯ ಮುಖ್ಯ ದ್ವಾರದ ಬಳಿ ಪ್ರತಿಭಟನೆಗೆ ಕುಳಿತ ನೂರಾರು ಮಂದಿ ನಿವಾಸಿಗಳು ರಸ್ತೆ ತಡೆ ಮಾಡಿ ವಾಹನ ಸಂಚಾರ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕೆಲ ನಿಮಿಷಗಳ ಕಾಲ ಆ ಮಾರ್ಗದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.Demand protest

ಕರ್ನಾಟಕ ಪೊಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ನಿರ್ಮಾಣಗೊಂಡಿರುವ ಈ ಬಡಾವಣೆ ಈವರೆಗೆ ಮೂಲಸೌಕರ್ಯ ಎಂಬುದು ಮರೀಚಿಕೆಯಾಗಿದೆ. ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಹಾಗೂ ತಿಪ್ಪಯ್ಯನ ಕೆರೆಯ ಮಾಲಿನ್ಯ ತೀವ್ರ ಸಮಸ್ಯೆಗಳಾಗಿವೆ. ಕೊಳವೆಬಾವಿ ಮೂಲಕ ಸರಬರಾಜಾಗುತ್ತಿರುವ ನೀರು ಅತ್ಯಂತ ಕ್ಷಾರಯುಕ್ತವಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಕೊಳಚೆ ನೀರು ಸೇರುತ್ತಿರುವುದರಿಂದ ಕೆರೆಯ ಪರಿಸರ ಹಾಗೂ ಸೌಂದರ್ಯ ಹದಗೆಟ್ಟಿದ್ದು, ಈ ಬಗ್ಗೆ ತುರ್ತು ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಥಾಮಸ್, ಸ್ಥಳೀಯರಾದ ಶಿವಸ್ವಾಮಿ, ಅಶೋಕ್, ಮನುಕುಮಾರ್, ಮೋಹನ್ ರಾವ್, ಲೋಹಿತ್, ಮಹೇಶ್, ಸ್ವಾಮಿ, ಶಿವರಾಮ್, ಗಗನ್, ಲೀಲಾ ಶಿವಕುಮಾರ್,  ಶೋಭಾ ಧನಂಜಯ, ಮೋಹನ್ ಕುಮಾರ್, ಸಿದ್ದರಾಜೇಗೌಡ, ವೀಣಾ ಕಾಮತ್, ವೆಂಕಟೇಶ್, ಶಿವಣ್ಣ, ಎನ್.ಎಂ. ಮಾನೆ, ದೇವಪ್ಪ ಸೇರಿದಂತೆ ಮುನ್ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.Demand jk02_new jk02 new

Key words: Demand, stop adding, polluted water, Thippaya Lake, protest, Mysore

English Summary
Title

Protests Erupt in Mysuru to Save Thippayyanakere Lake from Sewage Pollution

Short Description
Residents in Mysuru staged intense protests demanding an immediate halt to polluted water and raw sewage flowing into Thippayyanakere (Thippaya Lake). Despite recent rejuvenation efforts, massive amounts of untreated domestic waste from nearby layouts are leaking into the water body through stormwater drains. This severe contamination has caused toxic conditions, foul odours, and frequent fish deaths. Frustrated citizens blocked major roads and threatened an election boycott, urging MUDA and civic authorities to build a dedicated Sewage Treatment Plant (STP) and fix the city's drainage network to save the local ecosystem.
Keywords
Demand, stop adding, polluted water, Thippaya Lake, protest, Mysore