Sunday, October 4, 2026

BDA Apartments

Home Front Page ಚು. ಆಯೋಗದ ಮುಂದೆ ಧರಣಿ ಮಾಡಿಲ್ಲ: ತಪ್ಪು ಮಾಡಿದ್ರೆ ನನ್ನ ಮೇಲೆ ಕೇಸ್ ಹಾಕಲಿ- ಸಿಎಂ...

ಚು. ಆಯೋಗದ ಮುಂದೆ ಧರಣಿ ಮಾಡಿಲ್ಲ: ತಪ್ಪು ಮಾಡಿದ್ರೆ ನನ್ನ ಮೇಲೆ ಕೇಸ್ ಹಾಕಲಿ- ಸಿಎಂ ಡಿಕೆಶಿ

ಮೈಸೂರು,ಅಕ್ಟೋಬರ್,3,2026 (www.justkannada.in): ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ. ಯಾವ ಕಾನೂನನ್ನ ನಾನು ಉಲ್ಲಂಘಿಸಿಲ್ಲ. ನಾನು ತಪ್ಪು ಮಾಡಿದರೆ ನನ್ನ ಮೇಲೆ ಕೇಸ್ ಹಾಕಲಿ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಎಸ್ಐಆರ್ ಗೊಂದಲ ವಿಚಾರ ಕುರಿತು ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,   ರಾಜ್ಯ ಸರ್ಕಾರದಿಂದ ಪ್ರತ್ಯೇಕ ತನಿಖೆ ಸದ್ಯಕ್ಕೆ ಇಲ್ಲ. ಚುನಾವಣಾ ಆಯೋಗವೇ ಈ ಬಗ್ಗೆ ತನಿಖೆ ಮಾಡುತ್ತಿದೆ. ಎಲ್ಲಿಂದ ಫಾರ್ಮ್ ಗಳು ಮುದ್ರಣವಾಯಿತು. ಹೇಗೆ ಬಿಜೆಪಿ ಕೈಗೆ ತಲುಪಿತ್ತು ಎಂಬುದೆಲ್ಲಾ ಗೊತ್ತಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸತ್ಯ ದರ್ಶನ ಆಗಿದೆ. ಅವರು ಏನೇನು ಕ್ರಮ ಕೈಗೊಳ್ಳುತ್ತಾರೆ ನೋಡೋಣ. ಅಮೇಲೆ ನಮ್ಮ ತೀರ್ಮಾನ ಮಾಡುತ್ತೇವೆ ಎಂದರು.not dk shivakumar-dks.jpg1 dk shivakumar dks.jpg1

ನಾನು ಚುನಾವಣಾ ಆಯುಕ್ತರ ಮುಂದೆ ಧರಣಿ ಮಾಡಿಲ್ಲ. ಯಾವ ಕಾನೂನನ್ನ ನಾನು ಉಲ್ಲಂಘಿಸಿಲ್ಲ. ಸಮಸ್ಯೆ ಆಗಿರುವುದನ್ನ ಕಾನೂನಾತ್ಮಕವಾಗಿ ಆಯುಕ್ತರ ಗಮನಕ್ಕೆ ತಂದಿದ್ದೇನೆ. ಇದರಲ್ಲಿ ತಪ್ಪೇನಿದೆ. ಅವರು ಸಮಸ್ಯೆ ಬಗೆ ಚರ್ಚೆ ಮಾಡುವುದಕ್ಕೆ ಸಮಯ ಕೇಳಿದರು. ಇದಕ್ಕೆಲ್ಲ ಯಾಕೆ ಸಮಯ ಎಂದು ನಾವು ಅಲ್ಲೇ ಕುಳಿತೆವು‌. ಕೊನೆಗು ಪರಿಹಾರ ಸಿಕ್ಕಿದೆ. ಇದರಲ್ಲಿ ಧರಣಿ ಪ್ರಶ್ನೆ ಎಲ್ಲಿಂದ ಬಂತು. ನಾ‌ನು ಜನರ ಪ್ರತಿನಿಧಿಯಾಗಿ ಆಯುಕ್ತರ ಮುಂದೆ ಸಮಸ್ಯೆ ಹೇಳಿದ್ದೇನೆ. ಇದರಲ್ಲಿ ಯಾವ ತಪ್ಪು ಇದೆ ಹೇಳಿ ಎಂದು ಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ನಾನು ತಪ್ಪು ಮಾಡಿದರೆ ನನ್ನ ಮೇಲೆ ಕೇಸ್ ಹಾಕಲಿ. ಬಿಜೆಪಿಯವರು ಮೇಲಿನವರ ಒತ್ತಡದಿಂದ ಹೇಳಿಕೆ ಕೊಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ನನ್ನಿಂದ ಶಾಂತಿ ಭಂಗ ಆಗಿದ್ದರೆ, ಕಾನೂನು ಉಲ್ಲಂಘನೆಯಾಗಿದ್ದರೆ, ನನ್ನ ಮೇಲೂ ಕೇಸ್ ಹಾಕಲಿ ಎಂದ ಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರು ರಾಜಕೀಯಕ್ಕೆ ಮಾತನಾಡುತ್ತಿದ್ದಾರೆ. ಮಾತನಾಡುವುದು ಬಿಜೆಪಿಗೆ ಅನಿವಾರ್ಯ, ಮಾತನಾಡಲಿ ಎಂದು ಹೇಳಿದರು.

ಮೈಸೂರು ದಸರಾ: ಕಾಲ-ಕಾಲಕ್ಕೆ ಬದಲಾವಣೆ ಆಗಬೇಕು

ಇನ್ನು ಈ ಬಾರಿ ಅದ್ದೂರಿಯಾಗಿ ಮೈಸೂರು ದಸರಾ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಕಾಲ-ಕಾಲಕ್ಕೆ ಬದಲಾವಣೆ ಆಗಬೇಕು. ಈ ಹಿಂದೆ ಸಿನಿಮಾ ಇತ್ತು ಆ ಮೇಲೆ ಟಿವಿ ಬಂತು, ಫೋನ್ ಬಂತು , ಏನೇನೋ ಬಂತು ಅಲ್ವಾ ಹಾಗೆ ಬದಲಾವಣೆಯಾಗಬೇಕು ಎಂದರು.

ದಸರಾದಲ್ಲಿ ಕಂಬಳ ಆಚರಣೆಗೆ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಡಿಕೆಶಿ, ನಮ್ಮ ನದಿ ನೀರು ಬೇರೆ ರಾಜ್ಯಕ್ಕೆ ಹರಿಯಲ್ವಾ ? ಕೇರಳದ ಚಂಡೆ ನಮ್ಮಲ್ಲಿ ಮಾಡಲ್ವಾ? ಬೇರೆ ರಾಜ್ಯದವರನ್ನು ಬಂದು ಇಲ್ಲಿ ವಾಸ ಮಾಡೋದು ಬೇಡ ಅನ್ನೊಕ್ಕಾಗುತ್ತಾ? ನಮ್ಮ ತರಕಾರಿ ಅವರಿಗೆ ಹೋಗುತ್ತೆ, ಅವರ ವಸ್ತುಗಳು ನಮಗೆ ಬರುತ್ತೆ. ಇದು ನಾಡಹಬ್ಬ ದಸರಾ, ಎಲ್ಲಾ ಕಲೆಗಳು ಇರಲಿ ಅನ್ನೋದು ನಮ್ಮ ಆಸೆ. ಹೀಗಾಗಿ ಒಂದಷ್ಟು  ಬದಲಾವಣೆ ಮಾಡಿದ್ದೇವೆ. ನಮ್ಮ ಭರತನಾಟ್ಯ ಕೇರಳದಲ್ಲಿ ಮಾಡಲ್ವಾ. ಸಿನಿಮಾದವರಿಗೆ ದಸರಾ ಬನ್ನಿ ಅಂತ ಹೇಳಿದ್ದೇನೆ. ಎಲ್ಲರೂ ಬರುತ್ತಾರೆ ಅಂತ ಅಂದುಕೊಂಡಿದ್ದೇನೆ ಎಂದರು.

ದಸರಾದ ಜಂಬೂ ಸವಾರಿಗೆ ಬೇರೆ ನಿಮ್ಮ ರಾಜ್ಯದ ಕಲೆ ಸಂಸ್ಕೃತಿ ಸಾರುವ ಟ್ಯಾಬ್ಲೋ ಕಳುಹಿಸಿ ಎಂದು ಹೇಳಿದ್ದೇವೆ. ದಸರಾಗೆ ಬನ್ನಿ ಎಂದು ಅಕ್ಕಪಕ್ಕದ ರಾಜ್ಯದ ಸಿಎಂ ಗಳಿಗೆ ಮನವಿ ಮಾಡಿದ್ದೇವೆ. ಅವರಲ್ಲೂ ದಸರಾವಿದೆ. ಇನ್ನೆರಡು ದಿನಗಳಲ್ಲಿ ಅದೆಲ್ಲವೂ ಫೈನಲ್ ಆಗಲಿದೆ ಎಂದು ತಿಳಿಸಿದರು.not jk02_new jk02 new

ನೈಸ್ ಅಕ್ರಮ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಯಾರು ಏನಾದರೂ ಹೇಳಲಿ. ಎಲ್ಲದಕ್ಕೂ ಈ ದೇಶದಲ್ಲಿ ಕಾನೂನು ಇದೆ. ಕಾನೂನು ಯಾರದ್ದು ತಪ್ಪು ಯಾರದ್ದು ಸರಿ ಎಂದು ತೀರ್ಮಾನ ಮಾಡುತ್ತದೆ. ಎಲ್ಲದಕ್ಕೂ  ಪ್ರತಿಕ್ರಿಯೆ ಕೊಟ್ಟು ವಿಚಾರವನ್ನ ಡೈವರ್ಟ್ ಮಾಡುವುದಿಲ್ಲ. ಎಲ್ಲದಕ್ಕೂ ಕಾನೂನು ಉತ್ತರ ಕೊಡುತ್ತದೆ. ಆ ವಿಚಾರದ ಚರ್ಚೆ ಈಗ ಬೇಡ ಎಂದರು.

Key words: not, protest before, Election Commission,  case, against, me, CM, DK Shivakumar.

 

English Summary
Title

"I have not staged a protest before the Election Commission; if I have done anything wrong, let them file a case against me" – CM DK Shivakumar.

Short Description
I did not stage a protest before the Election Commissioner, nor did I violate any law. If I have committed any wrongdoing, let a case be registered against me," said CM DK Shivakumar. Speaking to the media in Mysuru today regarding the confusion surrounding the FIR, CM DK Shivakumar stated that there is no separate investigation by the state government at present, as the Election Commission itself is investigating the matter. He noted that details regarding where the forms were printed and how they reached the BJP are coming to light. "The Central Election Commission has realized the truth. Let us see what action they take; we will decide our course of action thereafter," he said.
Keywords
not, protest before, Election Commission, case, against, me, CM, DK Shivakumar.