Saturday, August 22, 2026

BDA Apartments

Home Front Page ಮಹಾರಾಷ್ಟ್ರದಲ್ಲಿ ಕೋವಿಡ್ 3ನೇ ಅಲೆ ಖಚಿತ! ಒಂದೇ ದಿನ 36 ಸಾವಿರ ಪ್ರಕರಣ

ಮಹಾರಾಷ್ಟ್ರದಲ್ಲಿ ಕೋವಿಡ್ 3ನೇ ಅಲೆ ಖಚಿತ! ಒಂದೇ ದಿನ 36 ಸಾವಿರ ಪ್ರಕರಣ

ಬೆಂಗಳೂರು, ಜನವರಿ 07, 2022 (www.justkannada.in): ಮಹಾರಾಷ್ಟ್ರದಲ್ಲಿ ಕೋವಿಡ್ ಮೂರನೇ ಅಲೆ ಖಚಿತವಾಗಿದೆ. ಕಳೆದ 24 ಗಂಟೆಯಲ್ಲಿ ದಾಖಲೆಯ 36,265 ಪ್ರಕರಣಗಳು ದೃಢಪಟ್ಟಿವೆ.

ಹೌದು. ವಾಣಿಜ್ಯ ನಗರಿ ಮುಂಬೈನಲ್ಲಿ ದಾಖಲೆಯ 20,181 ಕೊರೊನಾ ವೈರಸ್ ಪತ್ತೆಯಾಗಿವೆ. ಈ ಮೂಲಕ 3ನೇ ಅಲೆ ಅಪ್ಪಳಿಸಿರುವುದು ಖಚಿತವಾಗಿದೆ.

ಇದು 2020ರ ಮಾರ್ಚ್ ನಂತರ ಅತ್ಯಧಿಕ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದರ ಹತೆಗೆ 79 ಒಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 2837 ಮಂದಿ ಸೋಂಕಿನಿಂದ ಗುಣಮುಖಿತರಾಗಿದ್ದಾರೆ.