ಎಸ್ಸೆಸ್ಸೆಲ್ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ

ಬೆಂಗಳೂರು, ಜನವರಿ 07, 2022 (www.justkannada.in): ಎಸ್ಸೆಸ್ಸೆಲ್ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ಪ್ರಕಟಿಸಿದೆ.

ಮಾರ್ಚ್‍ 28ರಿಂದ ಏಪ್ರಿಲ್ 11ರವರೆಗೆ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ನಡೆಯಲಿದ್ದು, ಪೋಷಕರು ತಕರಾರು ಇದ್ದರೆ ಜನವರಿ 14ರೊಳಗೆ ಮೇಲ್ಮನವಿ ಸಲ್ಲಿಸಲು ತಿಳಿಸಿದೆ.

ಮಾರ್ಚ್ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಅರ್ಥಶಾಸ್ತ್ರ, ಕೋರ್ ಸ್ಬಬ್ಜೆಕ್ಟ್, ಏಪ್ರಿಲ್ 4ರಂದು ಗಣಿತ, ಸಮಾಜಶಾಸ್ತ್ರ, ಏಪ್ರಿಲ್ 6ರಂದು ತೃತೀಯ ವಿಜ್ಞಾನ ಏಪ್ರಿಲ್ 11ರಂದು ವಿಜ್ಞಾನ/ರಸಾಯನ ಶಾಸ್ತ್ರ/ರಾಜ್ಯಶಾಸ್ತ್ರ, ಕರ್ನಾಟಕ/ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷಾ ಅವಧಿ ನಿಗದಿಗೊಳಿಸಲಾಗಿದ್ದು, ಪ್ರತಿ ವಿಷಯವನ್ನೂ ಓದಲು ಪರೀಕ್ಷೆಗೂ ಮುನ್ನ 15 ನಿಮಿಷ ಕಾಲವಕಾಶ ನೀಡಲಾಗುವುದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ ತಿಳಿಸಿದೆ.