ಕರೋನಾ ವೈರಸ್ ಭೀತಿ: ರಾಜ್ಯದಲ್ಲೂ  ತೀವ್ರ ಕಟ್ಟೆಚ್ಚರ, ಹೈ ಅಲರ್ಟ್ ಘೋಷಣೆ…

ಬೆಂಗಳೂರು,ಮಾ,8,2020(www.justkannada.in):  ವಿಶ್ವದಾದ್ಯಂತ ಕೊರೋನಾ  ವೈರಸ್ ಭೀತಿ ಹಿನ್ನಲೆ. ಡಬ್ಲ್ಯೂಎಚ್ ಓ ಅಂತರರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ  ಘೋಷಿಸಿದ್ದು ಈ ಹಿನ್ನೆಲೆ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊರೋನಾ ವೈರಸ್ ಭೀತಿ ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದು ರಾಜ್ಯದಲ್ಲಿ 750 ಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ. 25ಕ್ಕೂ  ಅಬ್ಜರವೇಷನ್ ಅವಧಿ ಮುಕ್ತಾಯವಾಗಿದ್ದು  ರಾಜ್ಯದ 400ಕ್ಕೂ ಹೆಚ್ಚು ಜನರ ರಕ್ತಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 326 ಪ್ರಕರಣಗಳಲ್ಲಿ ನೆಗೆಟಿವ್ ರಿಪೋರ್ಟ್  ಬಂದಿದ್ದು, ಇಲ್ಲಿಯವರೆಗೂ ರಾಜ್ಯದಲ್ಲಿ ಯಾವುದೇ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ

ಬೆಂಗಳೂರು , ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ‌ನಿಲ್ದಾಣದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪೋನ್‌ ಕಾಲಾರ್ ಟ್ಯೂನ್ ನಲ್ಲೂ ಕರೋನ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, 104 ಉಚಿತ ಕರೆ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಜನ ಸಾಮನ್ಯರಿಗೆ ವೈರಸ್ ತಗುಲದಂತೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳುವ ಬಗ್ಗೆ ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದೆ.

Key words: corona virus: International -Health Emergency- Declaration-High alert – state