ಕೊರೊನಾ ಲಸಿಕೆ: ವಾರಿಯರ್ಸ್ ಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

ಮೈಸೂರು, ಮೇ 23, 2021: ಸರ್ಕಾರ ನಿಗದಿಪಡಿಸಿದ ಕೊರೋನಾ ವಾರಿಯರ್ಸ್‌ ಗಳ ಪಟ್ಟಿಯನ್ನು ಜಿಲ್ಲಾಧಿಕಾರಿ ಪ್ರಕಟಿಸಿದ್ದಾರೆ.

ಫೇಸ್ ಬುಕ್‌ಲೈವ್ ನಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರಕಟಿಸಿದ್ದಾರೆ. ಲಸಿಕೆ ನಿರ್ವಹಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇಮಕ ಮಾಡಲಾಗಿದೆ. ಕೊರೊನಾ ವಾರಿಯರ್ಸಗಳಾಗಿ 20 ಗುಂಪುಗಳನ್ನು ಗುರತಿಸಲಾಗಿದೆ. ಜಿಲ್ಲೆಯಲ್ಲಿ 34 ಸಾವಿರ ಲಸಿಕೆ ಲಭ್ಯ ಇದೆ . ಮೊದಲು ಕೊರೋನಾ ವಾರಿಯರ್ಸ್‌‌ಗಳಿಗೆ ಲಸಿಕೆ. ಎರಡನೇ ಹಂತದಲ್ಲಿ ಸರ್ಕಾರ ಆದ್ಯತೆಯ 18 ವರ್ಗಗಳ ಪಟ್ಟಿ ಮಾಡಿದೆ ಎಂದು ತಿಳಿಸಿದ್ದಾರೆ.

ಮುಂದಿನವಾರ ಅವರಿಗೆ ಲಸಿಕೆ ನೀಡಲಾಗುವುದು. 18 ರಿಂದ 44 ವರ್ಷದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ. ಜೆಎಸ್ ಎಸ್, ಅಪೋಲೊ ಭಾನವಿ, ಗೋಪಾಲ್ ಗೌಡ, ಆಶಾಕಿರಣ, ಬೃಂದಾವಾನ ಆಸ್ಪತ್ರೆಗಳಲ್ಲಿ ಲಸಿಕೆ. ಕೋವಿಡ್ ಮಿತ್ರದಿಂದ 15 ಸಾವಿರ ಜನರಿಗೆ ಪ್ರಯೋಜನವಾಗಿದೆ . ಮುಂಚಿತವಾಗಿ ಸೋಂಕು ಪತ್ತೆ ಹಚ್ವುವುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಟಾಸ್ಕ್ ಪೋರ್ಸ್ ಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿವೆ. ಜೂನ ಅಂತ್ಯದ ವೇಳೆಗೆ ಮನೆ ಮನೆ‌ ಸಮೀಕ್ಷೆ ಮುಕ್ತಾಯವಾಗಲಿದೆ. ಎಚ್ ಡಿ ಕೋಟೆ ಒಂದು ಗ್ರಾಮ ಪಂಚಾಯತಿ ಮಾತ್ರ ಕೊರೊನಾ ಮುಕ್ತವಾಗಿದೆ. ಡಿ ಬಿ ಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಒಂದು  ಪಾಸಿಟಿವ್ ದಾಖಲಾಗಿಲ್ಲ. ಎಲ್ಲಾ ಕೈ ಜೋಡಿಸಿದರೆ ಮುಂದಿನ ತಿಂಗಳ ಅಂತ್ಯಕ್ಕೆ ಮೈಸೂರು ಕೊರೊನಾ ‌ಮುಕ್ತ ಜಿಲ್ಲೆ ಆಗಲಿದೆ ಎಂದು ತಿಳಿಸಿದ್ದಾರೆ.

ಎಲ್ಲರೂ ತಾವಾಗಿಯೇ ಐಸೋಲೇಷನ್ ಆಗಬೇಕು. ಜಿಲ್ಲೆಯಲ್ಲಿ 45 ಮೇಲ್ಪಟ್ಟವರಿಗೆ ಲಸಿಕೆ ಸಾಕಷ್ಟು ದಾಸ್ತಾನು ಇದೆ. ಎಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಫೇಸ್‌ಬುಕ್ ಲೈವ್ ಮೂಲಕ ಮನವಿ ಮಾಡಿದ್ದಾರೆ.