ಸೋಲಾರ್ ಹಗರಣ ತನಿಖೆ ಮಾಡಿ, ದಾಖಲೆ ನೀಡಲು ನಾನು ಸಿದ್ಧ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು.

ನವದೆಹಲಿ,ಅಕ್ಟೋಬರ್,7,2022(www.justkannada.in): ಸಿಬಿಐ ಆದ್ರೂ ಸರಿ ಯಾವ ಸಂಸ್ಥೆಯಾದರೂ ಸರಿ, ಸೋಲಾರ್ ಹಗರಣ ತನಿಖೆ ಮಾಡಿ, ದಾಖಲೆ ನೀಡಲು ನಾನು ಸಿದ್ಧನಿದ್ಧೇನೆ ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಸೋಲಾರ್ ಹಗರಣ ಕುರಿತು ತನಿಖೆ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದು ಇದಕ್ಕೆ ಟಾಂಗ್ ನೀಡಿರುವ ಡಿ.ಕೆ ಶಿವಕುಮಾರ್, ಸೋಲಾರ್ ಹಗರಣ ತನಿಖೆ ಮಾಡಿ,  ನಿವೃತ್ತ ಜಡ್ಜ್ ನೇತೃತ್ವದಲ್ಲೋ ಅಥವಾ ಸಿಬಿಐ ತನಿಖೆಯಾಗಲಿ. ನನ್ನಿಂದ ಏನಾದ್ರೂ ತಪ್ಪಾಗಿದ್ದರೇ ಗಲ್ಲಿಗೇರಿಸಿ ಎಂದು ಹೇಳಿದರು.

ಸೋಲಾರ ಪಾರ್ಕ್ ಅತ್ಯುತ್ತಮ ಪ್ರಾಜೆಕ್ಟ್ ಮೋದಿ ಸರ್ಕಾರ ಕೂಡ ಇದನ್ನ ಪ್ರಶಂಸಿಸಿದೆ.  ಸಿಬಿಐ ಸೇರಿ ಯಾವ ಸಂಸ್ಥೆಯಿಂದಾದ್ರೂ ತನಿಖೆ ನಡೆಸಲಿ ಪ್ರಕರಣ ಸಂಬಂಧ ದಾಖಲೆ ನೀಡಲು ನಾನು ಸಿದ್ಧನಿದ್ದೇನೆ  ರೈತರಿಂದ ಅಕ್ರಮವಾಗಿ ಭೂಮಿ ಪಡೆದಿದ್ದರೇ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.

Key words: Investigate –solar-scam- KPCC -President -DK Shivakumar