‘ರಾಜಕೀಯ ರಾಜಾಹುಲಿ ಎಸ್.ಬಂಗಾರಪ್ಪ’ ಪುಸ್ತಕ ಬಿಡುಗಡೆ

ಮೈಸೂರು, ಆಗಸ್ಟ್ 25, 2019 (www.justkannada.in): ರಾಜಕೀಯ ರಾಜಾಹುಲಿ ಎಸ್ ಬಂಗಾರಪ್ಪ ಪುಸ್ತಕ ಬಿಡುಗಡೆ ಸಮಾರಂಭ ಇಂದು ನಡೆಯಿತು.

ಪತ್ರಕರ್ತ ಗಾಗೇನಹಳ್ಳಿ ಕೃಷ್ಣಮೂರ್ತಿ ಬರೆದಿರುವ ಪುಸ್ತಕವನ್ನು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ‌ ನಿಧನಕ್ಕೆ ಮೌನಾಚರಣೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಉರಿಲಿಂಗ ಪೆದ್ದ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕರ್ನಾಟಕ ಕಂಡ ಪ್ರಬುದ್ಧ ರಾಜಕಾರಣಿ ಎಸ್ ಬಂಗಾರ. ಇಂದಿನ ದಿನ ಯಾರನ್ನೋ ರಾಜಾಹುಲಿ ಎನ್ನುತ್ತಾರೆ. ಆದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾಂಬೆಯ ಬಿಲದಲ್ಲಿ ಸೇರಿಕೊಳ್ಳೋರನ್ನ ಹುಲಿಗಳು ಎನ್ನಲು ಸಾಧ್ಯವೇ..? ಎಂದು ಪ್ರಶ್ನಿಸಿದರು.

ಅನೈತಿಕ ಪ್ರಜಾಪ್ರಭುತ್ವ ಮತ್ತು ಅನೈತಿಕ ರಾಜಕಾರಣದ ಸಂದರ್ಭದಲ್ಲಿ ಬಂಗಾರಪ್ಪ ಅವರನ್ನು ನೆನೆಸಿಕೊಳ್ಳೊದು ಪ್ರಸ್ತುತ. ರಾಜೀನಾಮೆ ಕೊಟ್ಟು ಸ್ವಕ್ಷೇತ್ರಕ್ಕೆ ಮರಳಿ ಜನರ ನಡುವೆ ಇದ್ದಿದ್ದರೆ ಮಾತ್ರ ಅವರು ಹುಲಿಗಳು ಎಂದು ಹೇಳಿದರು.