ಕನ್ನಡಕ್ಕೆ ಬಂದ ಕಣ್ಸನ್ನೆ ಬೆಡಗಿ; ಶ್ರೇಯಸ್ ಮಂಜುಗೆ ನಾಯಕಿಯಾಗಲಿದ್ದಾರೆ ಪ್ರಿಯಾ ವಾರಿಯರ್

ಬೆಂಗಳೂರು:ಆ-25:(www.justkannada.in) ತಮ್ಮ ಮೊದಲ ಚಿತ್ರ ಒರು ಅದಾರ್ ಲವ್ ಸಿನಿಮಾ ಮೂಲಕ ರಾತ್ರೋರಾರಿ ದೇಶಾದ್ಯಂತ ಸೆನ್ಸೇಶನ್ ಸೃಷ್ಟಿಸಿದ್ದ ಮಲಯಾಳಂ ನಟಿ ಪ್ರಿಯಾ ವಾರಿಯರ್ ಈಗ ಕನ್ನಡ ಚಿತ್ರರಂಗಕ್ಕ ಕಾಲಿಟ್ಟಿದ್ದಾರೆ. ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಕನ್ನಡದ ವಿಷ್ಣುಪ್ರಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಅಭಿನಯದ ವಿಷ್ಣುಪ್ರಿಯ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಅಭಿನಯಿಸಲಿದ್ದಾರೆ. ಈ ಕುರಿತು ಸ್ವತ: ನಿ ರ್ಮಾಪಕ ಕೆ ಮಂಜು ತಿಳಿಸಿದ್ದಾರೆ.

ಈ ಚಿತ್ರವನ್ನು ಮಲಯಾಳಂ ನಿರ್ದೇಶಕ ವಿಕೆ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ.

ಮಲೆಯಾಳಂ ಮೂಲದ ಈ ನಿರ್ದೇಶಕರು ಈಗಾಗಲೇ 25ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸಾವಿರಾರು ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೇಯಸ್‌ ಲವರ್‌ಬಾಯ್‌ ರೀತಿಯ ಪಾತ್ರ ಮಾಡುತ್ತಿದ್ದಾರೆ. ಈ ಹೊತ್ತಿನ ಟ್ರೆಂಡ್ ಗೆ ತಕ್ಕಂತೆ ಸಿನಿಮಾ ಮೂಡಿ ಬರಲಿದೆ ಎಂದು ತಿಳಿಸಿದ್ದಾರೆ.

ಪಡ್ಡೆಹುಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್ ಮಂಜು ಅವರಿಗೆ ವಿಷ್ಣುಪ್ರಿಯ ಎರಡನೇ ಚಿತ್ರವಾಗಿದೆ. ಚಿತ್ರ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.

ಕನ್ನಡಕ್ಕೆ ಬಂದ ಕಣ್ಸನ್ನೆ ಬೆಡಗಿ; ಶ್ರೇಯಸ್ ಮಂಜುಗೆ ನಾಯಕಿಯಾಗಲಿದ್ದಾರೆ ಪ್ರಿಯಾ ವಾರಿಯರ್
Priya Varrier in a direct Kannada film