ನಂದಿಬೆಟ್ಟದ ಬಳಿ ಕಾರು ಪಲ್ಟಿಯಾಗಿ ನಾಲ್ವರ ಸಾವು; ಐವರಿಗೆ ಗಾಯ

ಬೆಂಗಳೂರು: ಆ-25:(www.justkannada.in) ಸ್ನೇಹಿತನ ಹುಟ್ಟುಹಬ್ಬ ಆಚರಣೆ ಬಳಿಕ ನಂದಿಬೆಟ್ಟಕ್ಕೆ ವಿಕೆಂಡ್ ಕಳೆಯಲು ತೆರಳುತ್ತಿದ ವೇಳೆ ಕಾರು ಪಲ್ಟಿಯಾಗಿ ಸ್ಥಳದಲ್ಲೆ ನಾಲ್ವರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಹಂದ್ರಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.

ಒಂಬತ್ತು ಜನರು ನಂದಿಬೆಟ್ಟಕ್ಕೆ ಎಸ್ ಯುವಿ ಕಾರಿನಲ್ಲಿ ತೆರಳುತ್ತಿದ್ದಾಗ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಉಳಿದ ಐವರು ಗಾಯಗೊಂಡಿದ್ದಾರೆ.

ರಮೇಶ್ (30), ಮಂಜುನಾಥ್ (26), ಅಶೋಕ್ ರೆಡ್ಡಿ (26), ಗೌರಿಶ್ (23) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಮೃತರೆಲ್ಲರು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಕ್ಕಲಪಲ್ಲಿ ಗ್ರಾಮದವರಾಗಿದ್ದಾರೆ.

ಗಾಯಗೊಂಡಿರುವ ಐವರನ್ನು ಹೊಸಕೋಟೆ ಮತ್ತು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚನ್ನರಾಯಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂದಿಬೆಟ್ಟದ ಬಳಿ ಕಾರು ಪಲ್ಟಿಯಾಗಿ ನಾಲ್ವರ ಸಾವು; ಐವರಿಗೆ ಗಾಯ
Tragic trip to Nandi Hills: 4 killed, 5 hurt in SUV crash