ಗೈಡ್ ಗಳಂತೆ ಅಡುಗೆ ಪುಸ್ತಕ ಬರುತ್ತಲೆ ಇವೆ : ಸಾಹಿತಿ ಡಾ.ಸಿ.ಪಿ.ಕೆ

ಮೈಸೂರು,ಮಾರ್ಚ್,04,2021(www.justkannada.in)ಅಡುಗೆ ಮಾಡುವವರಿಗೆ, ಗೈಡ್ ಗಳಂತೆ ಅಡುಗೆ ಪುಸ್ತಕ  ಬರುತ್ತಲೆ ಇದ್ದಾವೆ. ಅದರಲ್ಲಿ ಎಷ್ಟು ಒಳ್ಳೆಯ, ಕೆಟ್ಟ ಪುಸ್ತಕವಿದೆ ಎಂಬುದು ಗೊತ್ತಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.

jk

“ಅಡುಗೆಯ ಅತಃಪುರ” ಕೃತಿ ಲೋಕಾರ್ಪಣೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುನಂಶ್ರೀ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ವಿಜಯನಗರ ಕಸಾಪ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ನಂದಿನಿ ಮೂರ್ತಿ ಅವರ “ಅಡುಗೆಯ ಅತಃಪುರ” ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

 

ವಿದ್ಯಾರ್ಥಿಗಳಿಗೆ ಗೈಡ್ ಗಳು ಬಿಡುಗಡೆಯಾಗುವಂತೆ ಅಡುಗೆ ಮಾಡುವವರಿಗಾಗಿ ಅಡುಗೆ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಆದರೆ, ಅದರಲ್ಲಿ ಎಷ್ಟು ಪುಸ್ತಕಗಳು ಉತ್ತಮವಾಗಿವೇ ಎಂಬುದು ಗೊತ್ತಿಲ್ಲ ಎಂದರು.

 

ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿಲ್ಲ

ಆಹಾರವನ್ನು ಗೌರವವದಿಂದ ಕಾಣಬೇಕು. ರೋಗಗಳು ಅನಿರಿಕ್ಷೀತವಾಗಿ ಬರುತ್ತವೆ. ಈ ಕೃತಿಯ ರಚನೆಯ ಮೂಲಕ ನಂದಿನಿ ಮೂರ್ತಿ ಇತರರಿಗೆ ಮಾದರಿಯಾಗಿದ್ದಾರೆ. ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೇ ಹೊಸಲು ದಾಟಿ ಹೊರಗೆ ಹೆಜ್ಜೆಯಿಡುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

 

ಹೆಲ್ತ್ ಮಂತ್ರಾಸ್ ಆಫ್ ಡಯಾಬಿಟಿಸ್

ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಮಾತನಾಡಿ, ಅಡುಗೆಯ ಅಂತಃಪುರ ಇವರು ಪ್ರಸ್ತುತ ಕನ್ನಡದಲ್ಲಿ ಹೊರತರುತ್ತಿರುವ ಚೊಚ್ಚಲ ಕೃತಿ. ಇವರು ಇಂಗ್ಲಿಷ್ ನಲ್ಲಿ ರಚಿಸಿರುವ ಹೆಲ್ತ್ ಮಂತ್ರಾಸ್ ಆಫ್ ಡಯಾಬಿಟಿಸ್ ಎಂಬ ಪುಸ್ತಕ ತುಂಬಾ ಜನಪ್ರಿಯವಾಗಿದೆ.

ಅಡುಗೆಯ ಅಂತಃಪುರ ದಲ್ಲಿ 231 ಖಾದ್ಯಗಳ ತಯಾರಿಕೆಯ ಬಗ್ಗೆ ಸರಳವಾಗಿ, ಆಪ್ತವಾಗಿದೆ ಎಂದರು.

 

ನಂದಿನಿ ಮೂರ್ತಿ ಪೌಷ್ಠಿಕ ಆಹಾರದ ತಜ್ಞರಾಗಿರುವುದರಿಂದ ಕೃತಿಯಲ್ಲಿ ಪ್ರತಿಯೊಂದು ಖಾದ್ಯದಲ್ಲಿ ಅಂತರ್ಗತವಾದ ಕಾರ್ಬೋಹೈಡ್ರೇಟ್, ಪ್ರೊಟೀನ್ ಮತ್ತು ಕೊಬ್ಬಿನಾಂಶವನ್ನು ತಿಳಿಸುವುದರ ಜೊತೆಗೆ ಅದರಿಂದ ಎಷ್ಟು ಪ್ರಮಾಣದ ಚೈತನ್ಯ(ಕ್ಯಾಲೊರಿ) ಪ್ರಾಪ್ತವಾಗುತ್ತದೆ ಎಂಬುದನ್ನೂ ದಾಖಲಿಸಿದ್ದಾರೆ ಎಂದು ಹೇಳಿದರು.

 

ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡದ ಪುಸ್ತಕಗಳು ಲಭ್ಯವಾದಾಗ ಮಾತ್ರ ಕನ್ನಡ ಬಹು ಆಯಾಮದಲ್ಲಿ ಬೆಳೆಯುತ್ತದೆ. ನಂದಿನಿ ಮೂರ್ತಿಯವರ ಅಡುಗೆಯ ಅಂತಃಪುರವೆಂಬ ಈ ವಿನೂತನ ಪುಸ್ತಕ ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಲೇಖಕಿ ನಂದಿನಿ ಮೂರ್ತಿ, ಪರಿಷತ್ತು ಕಾರ್ಯದರ್ಶಿ ಡಾ.ಜಯಪ್ಪ ಹೊನ್ನಾಳಿ, ಕೋಶಾಧ್ಯಕ್ಷ ರಾಜಶೇಖರ ಕದಂಬ ಇತರರು ಉಪಸ್ಥಿತರಿದ್ದರು.

 

key words : guides-Cooking-Book-Come-There are-writer-Dr. C.P.K.