Tuesday, September 22, 2026

BDA Apartments

ಹಾವೇರಿ ಜಿಲ್ಲೆಯ ಆಡೂರು ಗ್ರಾಮದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹೈ ಅಲರ್ಟ್ BDA ...
Home Front Page ಹಾವೇರಿ ಜಿಲ್ಲೆಯ ಆಡೂರು ಗ್ರಾಮದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹೈ ಅಲರ್ಟ್

ಹಾವೇರಿ ಜಿಲ್ಲೆಯ ಆಡೂರು ಗ್ರಾಮದಲ್ಲಿ ಕೊರೊನಾ ಮುನ್ನೆಚ್ಚರಿಕೆ ಹೈ ಅಲರ್ಟ್

ಬೆಂಗಳೂರು, ಏಪ್ರಿಲ್ 19, 2020 (www.justkannada.in): ಹಾವೇರಿ ಜಿಲ್ಲೆಯವಆಡೂರಿನಲ್ಲಿ ಮುನ್ನೆಚ್ಚರಿಕೆಯ ಹೈ ಅಲರ್ಟ್ ಘೋಷಿಸಲಾಗಿದೆ.

ಆಡೂರಿನ ಸಂಬಂಧಿಕರ ಮನೆಯಲ್ಲಿ ಊಟ ಮಾಡಿ ಹೋಗಿದ್ದ ಕೊರೋನಾ ಪೇಷಂಟ್ ನಂಬರ್ 306 ಮತ್ತು 308 ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರ ಗ್ರಾಮದ 21 ಜನರು ಕ್ವಾರಂಟೈನ್ ಗೆ‌ ಒಳಪಡಿಸಲಾಗಿದೆ.

ಬಿಜಾಪುರದ 306 ಮತ್ತು 308 ಕೊರೋನಾ ಪೇಷಂಟ್ ಮಹಮ್ಮದ್ ಇಸಾಕ್ ಇಂಡಿಕಾನ್ (306)ಮತ್ತು ಇಸ್ಮಾಯಿಲ್ ಇಂಡಿಕಾರ (308) ಎಂಬುವರು ಡೆಲ್ಲಿಯ ತಬ್ಲಿಘಿ ಜಮಾತ್ ಗೆ ಹೋಗಿ ಬಂದವರಾಗಿರುತ್ತಾರೆ.

5/4/2020 ರಂದು ಬೆಳಿಗ್ಗೆ ಭಾಷಾಸಾಬ್ ಬಿಜಾಪುರ್ ಮನೆಗೆ ಊಟಕ್ಕೆ ಬಂದು ಹೋಗಿರುತ್ತಾರೆ.ಬಆಡೂರ ಪೋಲಿಸ್ ಠಾಣಾ ಪಿ ಎಸ್ ಐ ಆಂಜನೇಯ ಅವರು 21ಜನರನ್ನು ಇದೀಗ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿದ್ದಾರೆ.