Sunday, August 9, 2026

BDA Apartments

Home Front Page ಮೈಸೂರಿಗೆ ಬೆಂಗಳೂರಿನ ಪ್ರವಾಸಿಗರ ನಿರ್ಬಂಧ…?

ಮೈಸೂರಿಗೆ ಬೆಂಗಳೂರಿನ ಪ್ರವಾಸಿಗರ ನಿರ್ಬಂಧ…?

ಮೈಸೂರು,ಜು,6,2020(www.justkannada.in):  ಮಲ್ಲಿಗೆ ನಗರಿ ಮೈಸೂರಿನಲ್ಲಿ ಕೊವೀಡ್ ಪಾಸಿಟಿವ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಮೈಸೂರಿಗೆ ಬೆಂಗಳೂರು ಪ್ರವಾಸಿಗರ ನಿರ್ಬಂಧಕ್ಕೆ ಚಿಂತನೆ ನಡೆಸಲಾಗುತ್ತಿದೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ಮೈಸೂರಿನಲ್ಲಿ ಇನ್ನೂ ಪಾಸಿಟಿವ್ ಪ್ರಕರಣ ಜಾಸ್ತಿ ಆಗುತ್ತವೆ. ಹೀಗಾಗಿ ಬೆಂಗಳೂರಿನಿಂದ ಬರುವ ಪ್ರವಾಸಿಗರನ್ನು ನಿಷೇಧಿಸಬೇಕೆಂಬ ಒತ್ತಾಯ ಇದೆ. ಇದನ್ನು ಕೂಡ ಪರಿಶೀಲಿಸುತ್ತಿದ್ದೇವೆ. ಬೆಂಗಳೂರಿಂದ ಬರುವವರ ತಪಾಸಣೆ. ನಿಷೇಧ ಕಷ್ಟ ಸಾಧ್ಯ ಇದೆ. ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಇನ್ನೂ  ಕೊರೋನಾ ಪ್ರಕರಣ ಜಾಸ್ತಿ ಆಗುತ್ತವೆ. ತೆಗೆಯುತ್ತಿರುವ ಸ್ಯಾಂಪಲ್ ನಲ್ಲಿ ಹೆಚ್ಚು ಪಾಸಿಟಿವ್ ಬರುತ್ತಿವೆ. ಡೆತ್ ಕೂಡ ಜಾಸ್ತಿ ಆಗುತ್ತಿವೆ. ರೆಸಾರ್ಟ್ ಗಳಿಗೆ ಬರುತ್ತಿರುವ ಪ್ರವಾಸಿಗರ ನಿಷೇಧದ ಬಗ್ಗೆ ಗಂಭೀರವಾಗಿ ಚರ್ಚೆ ಮಾಡ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್ ತಿಳಿಸಿದ್ದಾರೆ.corona-mysore-bangalore-tourist-restriction

ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಮಹಾಮಾರಿ ಹೆಚ್ಚುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ಅಭಿರಾಂ ಜೀ ಶಂಕರ್, ಸರ್ಕಾರಿ ಅಧಿಕಾರಿಗಳಿಗೆ ಕೊರೊನಾ ಹೆಚ್ಚುತ್ತಿದೆ ಅಂತ ಕಚೇರಿಗಳನ್ನ ಬಂದ್ ಮಾಡಲು ಆಗಲ್ಲ. ಈಗ ಎಲ್ಲಾ ಕಡೆ ರೈತರು ತಮ್ಮ ಕೆಲಸ ಕಾರ್ಯಗಳಿಗೆ ಬರುವ ಸಮಯ. ಒಂದಲ್ಲಾ ಒಂದು ಕೆಲಸಕ್ಕೆ ರೈತರು ಬರುತ್ತಿರುತ್ತಾರೆ‌. ನಾವು ಅವರನ್ನ ಬರಬೇಡಿ ಅಂತ ಹೇಳಲು ಆಗಲ್ಲ. ಆದರೆ ಅನವಶ್ಯಕವಾಗಿ ಎಲ್ಲಿಗೂ ಹೋಗಬೇಡಿ. ಸುಖಾಸುಮ್ಮನೆ ಕಚೇರಿಗಳಿಗೆ ಅಲೆದಾಡಬೇಡಿ. ಇದರಿಂದ ಎಲ್ಲರಿಗೂ ತೊಂದರೆ ಆಗುತ್ತದೆ. ಸಾಧ್ಯವಾದಷ್ಟು ಎಲ್ಲರಿಗೂ ಹೆಚ್ಚು ಓಡಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.

Key words: corona- mysore-bangalore- Tourist -restriction