ಕೊರೊನಾ ಸೋಂಕಿತರು ಕಡಿಮೆ ಇದ್ದಾಗ ಲಾಕ್ ಡೌನ್ ಮಾಡಿ, ಜಾಸ್ತಿ ಆದ್ಮೆಲೆ ರಿಲೀಸ್ ಮಾಡಿದ್ರೆ ಪ್ರಯೋಜನ ಏನು?: ಎಂ. ಲಕ್ಷ್ಮಣ್ ಟೀಕೆ

ಮೈಸೂರು, ಮೇ 23, 2020 (www.justkannada.in): ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.

ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದಾಗ ಲಾಕ್ ಡೌನ್ ಮಾಡಿ ಈಗ ಸಡಿಲಿಕೆ ಮಾಡುತ್ತಿದ್ದಾರೆ. ವಾರದಲ್ಲಿ 6 ದಿನ ಎಲ್ಲದಕ್ಕೂ ಅನುಮತಿ ಕೊಟ್ಟು ಒಂದು ದಿನ ಲಾಕ್ ಡೌನ್ ಮಾಡಿದರೆ ಏನು ಪ್ರಯೋಜನ? ಇನ್ನು ಸಾಗರದ ಪ್ರವೀಣ್ ಎಂಬ ವ್ಯಕ್ತಿ ಸೋನಿಯಾ ಗಾಂಧಿಯವರ ಮೇಲೆ ಮೊಕದ್ದಮೆ ದಾಖಲು ಮಾಡಿರುವುದು ರಾಜಕೀಯ ಪ್ರೇರಿತ. ಅದು ಅವರ ವೈಯಕ್ತಿಕ ಟ್ವೀಟ್ ಅಲ್ಲ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಅದು ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಾಗಿದೆ. ಪ್ರಧಾನಿ ಮಂತ್ರಿ ನಿಧಿಯಲ್ಲಿರುವ ಹಣ ಯಾವ ಉದ್ದೇಶಕ್ಕಾಗಿ ಬಳಸುತ್ತಿದ್ದೀರಿ? ಜೆ. ಪಿ. ನಡ್ಡಾ ಅವರು ಡಿಜಿ ಐಜಿಪಿ ಪ್ರವೀಣ್ ಸೂದ್ ಗೆ ಎಫ್ಐಆರ್ ದಾಖಲಿಸುವಂತೆ ಪ್ರಭಾವ ಬೀರಿದ್ದಾರೆ. ಎಫ್ಐಆರ್ ದಾಖಲಿಸಿದ ಮಾತ್ರಕ್ಕೆ ನಾವು ಯಾವುದೇ ಕಾರಣಕ್ಕೂ ಧೃತಿಗೆಡುವುದಿಲ್ಲ. ಈ ಹಿಂದೆ ರಾಮ ಮಂದಿರ ವಿಚಾರದಲ್ಲಿ ಜನತೆಯ ಬಳಿ ಚಂದಾ ಎತ್ತಿದ್ದೀರಾ? ಆ ಹಣದ ಲೆಕ್ಕ ಕೇಳುವುದು ತಪ್ಪಾ..? ಒಂದು ಲಕ್ಷ ಕೋಟಿಯನ್ನು ಯಾವ ಬ್ಯಾಂಕ್ ನಲ್ಲಿ ಇಟ್ಟೀದ್ದೀರಿ ಹಾಗೂ ಇದರ ಲೆಕ್ಕ ಕೊಡಿ ಎಂದು ಪ್ರಶ್ನಿಸಿದ್ದಾರೆ.