ಮೊಲ ಬೇಟೆಯಾಡುತ್ತಿದ್ದವ ಅರಣ್ಯ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದ !

kannada t-shirts

ಚಾಮರಾಜನಗರ, ಮೇ 23, 2020 (www.justkannada.in): ಮೊಲ ಬೇಟೆಯಾಡುತ್ತಿದ್ದವನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಮಲೆಮಹದೇಶ್ವರ ವನ್ಯಜೀವಿ ವಲಯದಲ್ಲಿ ಕಾರ್ಯಾಚರಣೆ ನಡೆಸಿ ಬೇಟೆಗಾರನನ್ನು ಬಂಧಿಸಲಾಗಿದೆ. ಉರುಳುಗಳನ್ನ ಬಳಸಿ ಮೊಲಗಳನ್ನು ಭೇಟಯಾಡುತ್ತಿದ್ದ ವ್ಯಕ್ತಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಮಾರಳ್ಳಿ ಗ್ರಾಮದ ಸುಂದರ ನಾಯ್ಕ ಬಂಧಿತ ಆರೋಪಿ. ಬಂಧಿತನಿಂದ ಮೊಲದ ಕಳೇಬರ, ಹುರುಳುಗಳು ವಶಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೇಸ್ ದಾಖಲಿಸಿದ್ದಾರೆ.

website developers in mysore