Tuesday, September 22, 2026

BDA Apartments

ಇಂಗ್ಲೆಂಡ್’ನಲ್ಲಿರುವ ಇಬ್ಬರು ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು BDA JK_Adv ...
Home Front Page ಇಂಗ್ಲೆಂಡ್’ನಲ್ಲಿರುವ ಇಬ್ಬರು ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು

ಇಂಗ್ಲೆಂಡ್’ನಲ್ಲಿರುವ ಇಬ್ಬರು ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು

ಬೆಂಗಳೂರು, ಜುಲೈ 15, 2021 (www.justkannada.in): ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಬ್ಬರು ಸೋಂಕಿತರಲ್ಲಿ ಒಬ್ಬರಿಗೆ ನೆಗೆಟಿವ್ ವರದಿ ಬಂದಿರುವುದಾಗಿ (ಬಿಸಿಸಿಐ) ತಿಳಿಸಿದೆ. ಪಾಸಿಟಿವ್ ಇದ್ದ ಆಟಗಾರ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪಾಸಿಟಿವ್ ಬಂದಿರುವ ಇಬ್ಬರೂ ಆಟಗಾರರಿಗೆ ಬಹುತೇಕ ರೋಗ ಗುಣಲಕ್ಷಣಗಳಿರಲಿಲ್ಲ. ಸಣ್ಣ ಮಟ್ಟಿಗೆ ಶೀತ ಮತ್ತು ಕೆಮ್ಮು ಇತ್ತಷ್ಟೇ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದಹಾಗೆ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಆರಂಭಗೊಳ್ಳಲಿದೆ.