ಕೊರೋನಾ ಭೀತಿ ಹಿನ್ನೆಲೆ: ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ.

ಮೈಸೂರು,ಜುಲೈ,6,2021(www.justkannada.in): ಕೊರೊನಾ ಭೀತಿ ಹಿನ್ನೆಲೆ. ಆಷಾಢ ಶುಕ್ರವಾರಗಳಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ  ಭಕ್ತರ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಆಷಾಢ ಶುಕ್ರವಾರಗಳಂದು ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆ, ಸೋಂಕು ಹರಡುವ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟ ಹಾಗೂ ಉತ್ತನಹಳ್ಳಿ ಜ್ವಾಲಾ ತ್ರಿಪುರಸುಂದರಿ ದೇವಾಲಯಕ್ಕೆ ಸಾರ್ವಜನಿಕರ ನಿರ್ಬಂಧ ವಿಧಿಸಿ ಡಿಸಿ ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಹೀಗಾಗಿ ನಾಲ್ಕು ಆಷಾಢ ಶುಕ್ರವಾರ ಎರಡು ದಿನ ಅಮಾವಾಸ್ಯೆ ದಿನದಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಆಷಾಢ ಮಾಸದ ಶನಿವಾರ ಭಾನುವಾರ ಮತ್ತು ಸರ್ಕಾರಿ ಸಾರ್ವತ್ರಿಕ ರಜಾ ದಿನಗಳಂದು ಹಾಗೂ ಇಂದಿನಿಂದ ಪ್ರತಿದಿನ ಸಂಜೆ 6 00 ಘಂಟೆಯ ನಂತರವೂ ನಿರ್ಬಂಧ ವಿಧಿಸಲಾಗಿದೆ. ಈ ಕೆಳಕಂಡ ದಿನಗಳು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧವಿಧೆ.

09/07/2021 ಆಷಾಡ ಅಮಾವಾಸ್ಯೆ.

16/07/2021 ಮೊದಲನೇ ಆಷಾಡ ಶುಕ್ರವಾರ.

23/07/2021 2ನೇ ಆಷಾಡ ಶುಕ್ರವಾರ.

30/07/2021 3ನೇ ಆಷಾಡ ಶುಕ್ರವಾರ, ಅಮ್ಮನವರ ವರ್ಧಂತಿ,.

06/08/2021 4ನೇ ಆಷಾಡ ಶುಕ್ರವಾರ.

08/08/2021 ಭೀಮನ ಆಮಾವಾಸ್ಯೆ ದಿನ ನಿರ್ಬಂಧ.

ENGLISH SUMMARY…

Fear of Corona 3rd wave: Entry to Chamundi hills restricted during Ashada Friday
Mysuru, July 6, 2021 (www.justkannada.in): Deputy Commissioner of Mysuru Dr. Bagadi Goutham has issued orders restricting the entry of devotees to the Chamundi hills in Mysuru during the auspicious Ashada Friday, fearing increase in the number Coronavirus cases.
The number of devotees who visit the Chamundi temple atop the Chamundi hills during the auspicious month of Ashada will always be more than usual. As the fear of COVID-19 Pandemic has still not completely wiped out, entry of devotees to the Chamundi hills and the Jwala Tripurasundari Temple at Uttanahalli has been restricted as a precautionary measure.
Hence, there will be no entry for the devotees on all four Ashada Friday’s and two Amavasya days. Also, restrictions have been imposed on Saturday and Sunday during the Ashada month and government holidays. Entry to the temple is also restricted from today after 6.00 pm. Entry to the Chamundi hill for devotees will be restricted on all the following days:
09/07/2021 Ashada Amavasya
16/07/2021 1st Ashada Friday
23/07/2021 2nd Ashada Friday
30/07/2021 3rd Ashada Friday, Goddess Chamundeshwari Vardhanti
06/08/2021 4th Ashada Friday
08/08/2021 Bheemana Amavasya
Keywords: Chamundi hills/ Chamundi Temple/ Mysuru/ Ashada month/ entry for devotees/ restricted/ orders issued/ Mysuru Deputy Commissioner

Key words: Corona -Devotees -Chamundi Hills –Ashada- Fridays- Restriction