ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸುದ್ದಿಯಾದ ಕೂಲ್ ಕ್ಯಾಪ್ಟನ್ ಧೋನಿ ಕೆಲಸ !

ಬೆಂಗಳೂರು, ಸೆಪ್ಟೆಂಬರ್ 15, 2023 (www.justkannada.in): ಬೈಕ್​ನಲ್ಲಿ ಹೋಗುವಾಗ ದಾರಿ ಮಧ್ಯೆ ಲಿಫ್ಟ್​ ಕೇಳಿದ ಯುವ ಕ್ರಿಕೆಟಿಗನಿಗೆ ಆತನ​ ಕೋಚಿಂಗ್​ ಮೈದಾನದವರೆಗೆ ಲಿಫ್ಟ್ ಕೊಡುವ ಮುಖೇನ ತಮ್ಮ ಸರಳತೆ ಮೆರೆದಿದ್ದಾರೆ ಕೂಲ್ ಕ್ಯಾಪ್ಟನ್ ಧೋನಿ!

ಹೌದು,  ಕಾರು ಮತ್ತು ಬೈಕ್​ಗಳನ್ನು ರಾಂಚಿಯ ರಸ್ತೆಗಳಲ್ಲಿ ಚಲಾಯಿಸುವಾಗ ಅಭಿಮಾನಿಗಳ ಕಣ್ಣಿಗೆ ಸಿಕ್ಕು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್​ ಆಗುವ ಧೋನಿ ಅವರ ಮತ್ತೊಂದು ಕೆಲಸ ಈಗ ಮತ್ತೊಮ್ಮೆ ಎಲ್ಲರ ಮನ ಸೆಳೆದಿದೆ.

ಬೈಕ್​ನಲ್ಲಿ ಹೋಗುವಾಗ ದಾರಿ ಮಧ್ಯೆ ಲಿಫ್ಟ್​ ಕೇಳಿದ ಯುವ ಕ್ರಿಕೆಟಿಗನಿಗೆ ಲಿಫ್ಟ್ ಕೊಡುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ.

ಧೋನಿ ಅವರೊಂದಿಗೆ ಬೈಕ್​ ಸವಾರಿ ಮಾಡಿದ ಯುವಕ ವಿಡಿಯೋ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಖುಷಿಪಟ್ಟಿದ್ದಾನೆ.