ಉದ್ಯಮಿ ಪುತ್ರಿಯೊಂದಿಗೆ ನಟ ನಾಗ ಚೈತನ್ಯಗೆ 2ನೇ ಮದುವೆ ?

ಬೆಂಗಳೂರು, ಸೆಪ್ಟೆಂಬರ್ 15, 2023 (www.justkannada.in): ತೆಲಗು ನಟ ನಾಗ ಚೈತನ್ಯ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ನಟಿ ಸಮಂತಾ ಅವರನ್ನು ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ನಂತರ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಮತ್ತೊಂದು ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಾಗಚೈತನ್ಯ ತಂದೆ ನಾಗಾರ್ಜುನ ಈಗಾಗಲೇ ಹುಡುಗಿಯನ್ನು ನೋಡಿದ್ದು, ಉದ್ಯಮಿಯೊಬ್ಬರು ಮಗಳನ್ನು ನಾಗಚೈತನ್ಯ ಮದುವೆಯಾಗಲಿದ್ದಾರೆ ಎಂಬ ಸುದ್ದಿಹರಿದಾಡುತ್ತಿದೆ.

ಈ ಬಗ್ಗೆ ಅಕ್ಕಿನೇನಿ ಅವರ ಕುಟುಂಬದವರು ಯಾರೂ ಪ್ರತಿಕ್ರಿಯೆ ನೀಡಿಲ್ಲ. ಇದರಲ್ಲಿ ಸತ್ಯಾಂಶ ಏನು ಎಂಬುದು ತಿಳಿಯಬೇಕಿದೆ.

ಅಂದಹಾಗೆ ಸಮಂತಾ ವಿಚ್ಛೇದನದ ನಂತರ ನಾಗ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾಧ್ಯಮಗಳಲ್ಲಿ ವರದಿಯನ್ನು ಶೋಭಿತಾ ನಿರಾಕರಿಸಿದ್ದರು.