Tuesday, September 22, 2026

BDA Apartments

ಹೆಚ್ ಡಿಕೆ ಕುರಿತು ವಿವಾದಾತ್ಮಕ ಹೇಳಿಕೆ: ಸ್ಪಷ್ಟನೆ ಕೊಟ್ಟ ಸಚಿವ ಜಮೀರ್ BDA JK_Adv ...
Home Front Page ಹೆಚ್ ಡಿಕೆ ಕುರಿತು ವಿವಾದಾತ್ಮಕ ಹೇಳಿಕೆ: ಸ್ಪಷ್ಟನೆ ಕೊಟ್ಟ ಸಚಿವ ಜಮೀರ್

ಹೆಚ್ ಡಿಕೆ ಕುರಿತು ವಿವಾದಾತ್ಮಕ ಹೇಳಿಕೆ: ಸ್ಪಷ್ಟನೆ ಕೊಟ್ಟ ಸಚಿವ ಜಮೀರ್

ಚನ್ನಪಟ್ಟಣ,ನವೆಂಬರ್,11,2024 (www.justkannada.in): ಚನ್ನಪಟ್ಟಣದಲ್ಲಿ ಪ್ರಚಾರದ ವೇಳೆ  ಕರಿಯ ಕುಮಾರಸ್ವಾಮಿ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಇಂದು ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಅವರು, ಕುಮಾರಸ್ವಾಮಿಯವರನ್ನ ಯಾವಾಗಲೂ ಹಾಗೆ ಕರೆಯುತ್ತೇನೆ. ಹೆಚ್ ಡಿಕೆಯನ್ನ ಪ್ರೀತಿಯಿಂದ ಕರಿಯಣ್ಣ ಅಂತಾ ಕರೆಯುತ್ತೇನೆ. ನನ್ನನ್ನು ಕುಮಾರಸ್ವಾಮಿ ಅವರು ಕುಳ್ಳ ಅಂತ ಕರೆಯುತ್ತಾರೆ. ನಾವು ಬೇರೆ ಪಕ್ಷದಲ್ಲಿದ್ದರೂ  ಸ್ನೇಹಿತರು.  ನಾವು ಹಳೇ ಸ್ನೇಹಿತರು ಎಂದರು.

ನಾನು ಕುಮಾರಸ್ವಾಮಿ ಆಸ್ತಿಯನ್ನು ಖರೀದಿಸುತ್ತೇನೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ 20 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Controversial, statement, HDK, Minister, Zameer, clarified