ಒಂದು ತಿಂಗಳೊಳಗೆ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ ಕಾರ್ಯ ಮುಗಿಸಿ-ಅಧಿಕಾರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸೂಚನೆ…

ಬೆಂಗಳೂರು, ಡಿ.26,2019(www.justkannada.in): ಒಂದು ತಿಂಗಳೊಳಗೆ ಶುದ್ದ ಕುಡಿಯುವ ನೀರಿನ ಘಟಕ ಗಳ ದುರಸ್ತಿ ಕಾರ್ಯವನ್ನ ಮುಗಿಸಬೇಕು ಎಂದು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ವಿಕಾಸಸೌಧದ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಗಳ ಸಿಇಓ  ಹಾಗೂ ಹಿರಿಯ ಅಧಿಕಾರಿಗಳೊಂದಿಗೆ  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಎಸ್ ಈಶ್ವರಪ್ಪ  ಪ್ರಗತಿ ಪರಿಶೀಲನಾ ಸಭೆ  ನಡೆಸಿದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಮಾಡುವ ಕುರಿತು.  ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಮತ್ತು ನಿಂತು ಹೋಗಿರುವ ಘಟಕಗಳ ದುರಸ್ತಿ ಕಾರ್ಯ ಶೀಘ್ರ ಮಾಡುವ ಕುರಿತು ಚರ್ಚಿಸಲಾಯಿತು.

ಪ್ರಮುಖವಾಗಿ ಬಾಗಲಕೋಟೆ ಜಿಲ್ಲೆ. ಬೆಳಗಾವಿ, ಧಾರವಾಡ, ರಾಯಚೂರು  ಮುಂತಾದ ಜಿಲ್ಲೆಗಳಲ್ಲಿ  ತೀವ್ರ ತೊಂದರೆ ಇದೆ. ಅವುಗಳ ದುರಸ್ಥಿ ಕಾರ್ಯ ಒಂದು ತಿಂಗಳ ಕಾಲಾವಧಿಯಲ್ಲಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಕೆ.ಎಸ್ ಈಶ್ವರಪ್ಪ ಸೂಚಿಸಿದರು.  RDPR ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ  ಅತೀಕ್ ರವರು ಸಚಿವರಿಗೆ ಪ್ರಗತಿ ಪರಿಶೀಲನಾ ವರದಿ ನೀಡಿದರು.

Key words: Complete -repair -work – drinking water units -Minister -KS Eshwarappa -meeting