Monday, September 14, 2026

BDA Apartments

ಕಾಂಗ್ರೆಸ್ ನಲ್ಲಿ ಬ್ಲಾಕ್ ಮೇಲ್, ಷರತ್ತುಗಳು ನಡೆಯಲ್ಲ- ಮಾಜಿ ಸಚಿವ ಡಿ.ಕೆ ಶಿವ...
Home Front Page ಕಾಂಗ್ರೆಸ್ ನಲ್ಲಿ ಬ್ಲಾಕ್ ಮೇಲ್, ಷರತ್ತುಗಳು ನಡೆಯಲ್ಲ- ಮಾಜಿ ಸಚಿವ ಡಿ.ಕೆ ಶಿವಕುಮಾರ್…

ಕಾಂಗ್ರೆಸ್ ನಲ್ಲಿ ಬ್ಲಾಕ್ ಮೇಲ್, ಷರತ್ತುಗಳು ನಡೆಯಲ್ಲ- ಮಾಜಿ ಸಚಿವ ಡಿ.ಕೆ ಶಿವಕುಮಾರ್…

ಬೆಂಗಳೂರು,ಡಿ,26,2019(www.justkannada.in): ಕಾಂಗ್ರೆಸ್ ನಲ್ಲಿ ಬ್ಲಾಕ್ ಮೇಲ್, ಷರತ್ತುಗಳು ನಡೆಯಲ್ಲ. ನಾನು ಹೇಳಿದಂತೆ ನಡೆಯಬೇಕು ಅಂದರೆ ಆಗುವುದಿಲ್ಲ  ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಲ್ಲಿ ಐದು ನಿಮಿಷಕ್ಕೆ ಟೋಪಿ ಬದಲಾಗುತ್ತದೆ.  ಕಾಂಗ್ರೆಸ್‌ನಲ್ಲಿ ಬ್ಲಾಕ್ ಮೇಲ್ ಷರತ್ತುಗಳು ನಡೆಯಲ್ಲ. ಯಾರಾದರೂ ಬ್ಲ್ಯಾಕ್‌ಮೇಲ್ ಮಾಡುತ್ತಾರೆ ಅಂದರೆ ಅವರಷ್ಟು ಮೂರ್ಖರು ಯಾರೂ ಇಲ್ಲ ಎಂದು ತಿಳಿಸಿದರು.

ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ ನನ್ನದೂ ನಡೆಯೋದಿಲ್ಲ ಬೇರೆಯವರದ್ದೂ ನಡೆಯೋದಿಲ್ಲ. ನನ್ನದೇ ನಡೆಯಬೇಕು ಎಂದರೆ ಅಂತಹ ಮೂರ್ಖರು ಸಿಗಲ್ಲ. ಕೇವಲ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದರೆ ಮಾತ್ರ ಗೌರವ ಸಿಗುತ್ತದೆ. ಪಕ್ಷದಲ್ಲಿ ಷರತ್ತುಗಳು ಎಂದು ಹೋದರೆ ಏನು ಆಗಲ್ಲ ಎಂದು ಕೆಲ ನಾಯಕರಿಗೆ ಪರೋಕ್ಷವಾಗಿ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.

ಇನ್ನು ಮಂಗಳೂರು ಗಲಭೆ ಮೃತರ ಕುಟುಂಬಕ್ಕೆ ಘೋಷಿಸಿದ ಪರಿಹಾರಕ್ಕೆ ತಡೆ ನೀಡಿದ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಕೋರ್ಟ್ ತೀರ್ಪಿನ ಮೊದಲೇ ಸರ್ಕಾರ ತೀರ್ಪು ನೀಡಿದೆ.  ಮೊದಲು ಪರಿಹಾರ ಘೋಷಿಸಿ ನಂತರ ತಡೆ ಹಿಡಿದಿದ್ದಾರೆ. ದೆಹಲಿಯಿಂದ ಫೋನ್ ಬಂದಿದ್ದಕ್ಕೆ ತಡೆ ಹಿಡಿದಿದ್ದಾರೆ ಎಂದು ಲೇವಡಿ ಮಾಡಿದರು.

Key words: Congress- no- Black mail – conditions- Former Minister -DK Sivakumar.