ಮೈಸೂರಿನಲ್ಲಿ ಆತಂಕ ಸೃಷ್ಟಿಸಿದ ಸಮುದಾಯಕ್ಕೆ ಹಬ್ಬಿರುವ ನಾಲ್ಕು ಪಾಸಿಟಿವ್ ಕೇಸ್ : ಸ್ವಯಂ ದಾಖಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಡಿಸಿ ಮನವಿ

ಮೈಸೂರು,ಜು,9,2020(www.justkannada.in): ಮೈಸೂರಿನಲ್ಲಿ ಮಹಾಮಾರಿ ಕೊರೊನಾ ಸಮುದಾಯಕ್ಕೆ ಹಬ್ಬಿದ್ದು, ನಾಲ್ಕು ಪಾಸಿಟಿವ್ ಕೇಸ್‌‌ಗಳು ಆತಂಕ ಸೃಷ್ಟಿಸಿವೆ.jk-logo-justkannada-logo

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿರುವ  ನಾಲ್ವರು ವ್ಯಕ್ತಿಗಳಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದ್ದು ಈ ನಾಲ್ವರು ಸೋಂಕಿತರ ಟ್ರಾವಲ್ ಹಿಸ್ಟರಿ ಭಾರಿ  ಭೀತಿ ಹುಟ್ಟಿಸಿದೆ. ಈ ನಾಲ್ವರು ಸೋಂಕಿತರು ಭೇಟಿ ಮಾಡಿದ್ದ ಸ್ಥಳದಲ್ಲಿನ‌ ಸಾರ್ವಜನಿಕರು  ಸ್ವಯಂ ದಾಖಲಿಸಿಕೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಸಾರ್ವಜನಿಕರಲ್ಲಿ ಬಹಿರಂಗ ಮನವಿ ಮಾಡಿದ್ದಾರೆ. ಜತೆಗೆ  ಸೋಂಕಿತರು ಓಡಾಡಿರುವ ದಿನಾಂಕ ಸಮಯವನ್ನ ಬಿಡುಗಡೆ ಮಾಡಿದ್ದಾರೆ.

ನಾಲ್ಕು ಜನ ಸೋಂಕಿತರ ಸಂಪರ್ಕದವರನ್ನು ಹುಡುಕಲು ಮೈಸೂರು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆ ಮೊರೆ ಹೋಗಿದ್ದು ನಾಲ್ವರ ಟ್ರಾವೆಲ್ ಹಿಸ್ಟರಿ ಹೀಗಿದೆ…

1)  ಉದಯಗಿರಿಯ ರಾಯಲ್ ಎಸ್ಕಾರ್ಟ್ ಪಾಲಿಕ್ಲಿನಿಕ್ ವೈದ್ಯರಿಗೆ ಸೋಂಕು ಧೃಡವಾಗಿದೆ. ಆದ್ದರಿಂದ 20/06/2020 ರಿಂದ 02/07/2020ರವರೆಗೆ ಈ ಕ್ಲಿನಿಕ್‌ನಲ್ಲಿ ವೈದ್ಯಕೀಯ ತಪಾಸಣೆಗೆ ಬಂದ ರೋಗಿಗಳು, ರೋಗಿಗಳು ಕುಟುಂಬದವರು ಮಾಹಿತಿ ನೀಡಬೇಕಾಗಿದೆ.corona-positive-community-spread-mysore-mysore-dc

2) ಸಿದ್ದಾರ್ಥನಗರದ ಕಾರ್ಪೋರೇಷನ್ ಬ್ಯಾಂಕ್‌ ಗೆ ಹೋಗಿದ್ದ ಸೋಂಕಿತ ಕೊರೊನಾ‌ ಸೋಂಕಿತನೊಬ್ಬ 30/06 ಹಾಗೂ 06/07ರಂದು ಬ್ಯಾಂಕ್‌ಗೆ ಹೋಗಿ ಹಣ ಜಮಾವಣೆ ಮಾಡಿರುತ್ತಾರೆ. ಜೊತೆಗೆ 04/07 ರಂದು ಎನ್ ಆರ್ ಮೊಹಲ್ಲಾದ ರವಿಕುಮಾರ್ ಕ್ಲಿನಿಕ್‌ಗೆ ಭೇಟಿ ನೀಡಿರುತ್ತಾರೆ. ಈ ವೇಳೆ ಎರಡು ಸ್ಥಳಗಳಿಗೆ ಭೇಟಿ ನೀಡಿದ್ದವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.

3) ಫೌಂಟೇನ್ ವೃತ್ತದ ಕೆಪಿಟಿಸಿಎಲ್ ಸಿಬ್ಬಂದಿಗೆ ಸೋಂಕು: 01/07/2020ರಂದು ಈ ಸಿಬ್ಬಂದಿಗೆ ಸೋಂಕು ಧೃಡವಾಗಿದೆ. ಇವರು 16/06/2020 ರಂದು ಮೈಸೂರಿನ ಕೆಸರೆ ಬಡಾವಣೆಯ ಕೆಇಬಿ ಭವನದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಆದ್ದರಿಂದ ರಕ್ತದಾನ ಶಿಬಿರದಲ್ಲಿ ಭಾಗಿಯಾದವರು ಮಾಹಿತಿ ನೀಡಬೇಕು.

4) ಮಂಡಿಮೊಹಲ್ಲಾದ ನಿವಾಸಿಗೆ ಕೊರೊನಾ ಪಾಸಿಟಿವ್ : ಇವರು ಕ್ಲಿನಿಕ್ ಹಾಗೂ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದಾರೆ.  28/06/2020ರಂದು ಮಂಡಿ‌ಮೊಹಲ್ಲಾದ ಚೇತನ‌ ಕ್ಲಿನಿಕ್‌ಗೆ ಹೋಗಿದ್ದಾರೆ. 12/06/2020 ರಿಂದ 02/07/2020ರವರೆಗೆ ವಿವಿಧ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದಾರೆ

ಸರಸ್ವತಿಪುರಂ ಎಟಿಎಂ

ಅಪೋಲೋ ಆಸ್ಪತ್ರೆ ಎಟಿಎಂ

ಎಪಿಎಂಸಿ ಕುವೆಂಪುನಗರ ಎಟಿಎಂ

ಶ್ರೀರಾಂಪುರ

ಸಿದ್ಧಾರ್ಥ ನಗರ

ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜು

ಪೋರಂ ಮಾಲ್ ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ಕ್ಲಿನಿಕ್ ಹಾಗೂ ಎಟಿಎಂಗಳಿಗೆ ಹೋಗಿದ್ದವರು ಮಾಹಿತಿ ನೀಡಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಮನವಿ ಮಾಡಿದ್ದಾರೆ.

Key words: Corona Positive – Community Spread-mysore-Mysore- DC