ಮೈಸೂರಿನಲ್ಲಿ ಕೋವಿಡ್ -19 ಅಟ್ಟಹಾಸ: ಇಂದು ಸಹ 44 ಮಂದಿಗೆ ಕೊರೋನಾ ಪಾಸಿಟಿವ್ ಸಾಧ್ಯತೆ..

ಮೈಸೂರು,ಜು,9,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ದಿನೇ ದಿನೇ ಅಬ್ಬರಿಸುತ್ತಿರುವ ಕಿಲ್ಲರ್ ಕೊರೋನಾದಿಂದ ಜಿಲ್ಲೆಯ ಜನ ಭೀತರಾಗಿದ್ದಾರೆ.jk-logo-justkannada-logo

ನಿನ್ನೆ ಮೈಸೂರಿನಲ್ಲಿ 59 ಕೊರೋನಾ ಪ್ರಕರಣ ಕಂಡು ಬಂದಿದ್ದವು. ಹಾಗೆಯೇ ಇಂದು ಕೂಡ ಜಿಲ್ಲೆಯಲ್ಲಿ 44 ಮಂದಿಗೆ ಕೊರೊನಾ ಪಾಸಿಟಿವ್  ಬರುವ ಸಾಧ್ಯತೆ ಇದೆ. ಮೈಸೂರು ನಗರದಲ್ಲಲ್ಲದೇ ತಾಲ್ಲೂಕು ಗ್ರಾಮೀಣ ಭಾಗಕ್ಕೂ ಕೊರೋನಾ ಮಹಾಮಾರಿ ಲಗ್ಗೆ ಇಡುತ್ತಿದ್ದು, ಹೆಚ್‌.ಡಿ ಕೋಟೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.covid-19-mysore-today-44-corona-positive

ನಗರ ಭಾಗ ಸೇರಿದಂತೆ ಗ್ರಾಮೀಣಾ ಭಾಗದಲ್ಲೂ ಕೊರೊನಾ ಹರಡುತ್ತಿರುವ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಹೆಚ್ಚಿದ ಆತಂಕ ಶುರುವಾಗಿದೆ. ಪೊಲೀಸ್ ಇಲಾಖೆ ಸಿಬ್ಬಂದಿ, ಮಹಾನಗರ ಪಾಲಿಕೆ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ ಗಳಿಗೂ ಕೊರೋನಾ ತಗುಲಿತ್ತಿದ್ದು ಕೊರೊನಾ ತಡೆಗಾಗಿ ಜಿಲ್ಲೆಯಲ್ಲಿ ಸಂಜೆ 6 ರಿಂದ ಬೆಳಗಿನ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಇನ್ನು  ನಗರದ ಪಾರ್ಕ್, ಆಟದ ಮೈದಾನ ಇತರೆ ಭಾಗಗಳಲ್ಲಿ  ನಿರ್ಬಂಧ ವಿಧಿಸಲಾಗಿದೆ. ಹೀಗೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ರೂ ಕೊರೊನಾ  ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ.

Key words: covid-19 – Mysore-today- 44 – Corona positive.