Tuesday, September 22, 2026

BDA Apartments

ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ-ಸಿದ್ಧರಾಮಯ್...
Home Front Page ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ-ಸಿದ್ಧರಾಮಯ್ಯಗೆ  ಕೆ.ಎಚ್ ಮುನಿಯಪ್ಪ ಸಲಹೆ.

ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ-ಸಿದ್ಧರಾಮಯ್ಯಗೆ  ಕೆ.ಎಚ್ ಮುನಿಯಪ್ಪ ಸಲಹೆ.

ಕೋಲಾರ,ನವೆಂಬರ್,16,2022(www.justkannada.in):  ಕೋಲಾರದಲ್ಲಿ ಸ್ಪರ್ಧೆಸುವ  ಬಗ್ಗೆ ಸಿದ್ಧರಾಮಯ್ಯ ಸುಳಿವು ನೀಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ಧರಾಮಯ್ಯಗೆ ಕಾಂಗ್ರೆಸ್ ನಾಯಕ  ಕೆ.ಎಚ್ ಮುನಿಯಪ್ಪ ಮಹತ್ವದ ಸಲಹೆ ನೀಡಿದ್ದಾರೆ.

ಹೌದು,  ಕೋಲಾರದಲ್ಲಿ ಸಮಸ್ಯೆ ಇದೆ. ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ  ಎಂದು ಸಲಹೆ ನೀಡುತ್ತೇನೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡೇ ಕೋಲಾರಕ್ಕೆ ಸ್ಪರ್ಧೆಗೆ ಬನ್ನಿ khmuniyappa

ಈ ಕುರಿತು ಮಾತನಾಡಿರುವ ಕೆಎಚ್ ಮುನಿಯಪ್ಪ, ಕೋಲಾರದಲ್ಲಿ ಸಮಸ್ಯೆ ಇದೆ. ಮೂಲ ಕಾಂಗ್ರೆಸ್ ನಾಯಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ . ಎಲ್ಲಾ ಸಮಸ್ಯೆ ಸರಿಪಡಿಸಿಕೊಂಡು ಬಂದರೇ ಕೋಲಾರಕ್ಕೆ ಬಂದರೆ ಸ್ಪರ್ಧೆಗೆ ಅನುಕೂಲ. ಬಿಜೆಪಿ ಪರ ಇದ್ದವರನ್ನ ನಂಬಿದರೇ ಕೋಲಾರದಲ್ಲಿ ಗೆಲ್ಲಲ್ಲ.  ಸಮಸ್ಯೆ ಸರಿಪಡಿಸಿಕೊಂಡೇ ಬನ್ನಿ ಎಂದು ಸಲಹೆ  ನೀಡುತ್ತೇನೆ ಎಂದು ತಿಳಿಸಿದ್ದಾರೆ.

Key words: Come – Kolar – competition –after- solving – problems-KH Muniyappa -Siddaramaiah.