Monday, August 17, 2026

BDA Apartments

Home Front Page ರಾಜ್ಯ ಸಮ್ಮಿಶ್ರ ಸರ್ಕಾರ ಮುಳ್ಳಿನ ಮೇಲಿನ ಬಟ್ಟೆಯಿದ್ದಂತೆ- ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಟೀಕೆ..

ರಾಜ್ಯ ಸಮ್ಮಿಶ್ರ ಸರ್ಕಾರ ಮುಳ್ಳಿನ ಮೇಲಿನ ಬಟ್ಟೆಯಿದ್ದಂತೆ- ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಟೀಕೆ..

ಚಾಮರಾಜನಗರ,ಜೂ,11,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರ ಮುಳ್ಳಿನ ಮೇಲಿನ ಬಟ್ಟೆಯಿದ್ದಂತೆ ಯಾವಾಗ ಸರ್ಕಾರ ಬಿದ್ದೋಗುತ್ತದೆ ಎಂದು ರಾಜ್ಯದ ಜನತೆ ಬಯಸುತ್ತಿದ್ದಾರೆ ಎಂದು ಮಾಜಿ ಸಚಿವ,ರಾಜ್ಯ ಬಿಜೆಪಿವಕ್ತಾರ ಸುರೇಶ್ ಕುಮಾರ್ ಹೇಳಿದರು.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಸುರೇಶ್ ಕುಮಾರ್, ಮೈತ್ರಿ ಸರ್ಕಾರ ಇರುವವರಿಗೂ ಇದು ಎಷ್ಟು ದಿನ ನಡೆಯುತ್ತದೆಂದು ವಿಶ್ವಾಸವಿಲ್ಲ. ರಾಜ್ಯಕ್ಕೆ ಒಳ್ಳೆ ಆಡಳಿತ ಕೊಡುವ ಸರ್ಕಾರ ಬೇಕು, ಆ ದೃಷ್ಟಿಯಿಂದ ಇವರು ಕೆಲಸ ಮಾಡಿದರೆ ಒಳ್ಳೆಯದು. ಇಲ್ಲವಾದರೆ ನಾವು ಒಳ್ಳೆ ಸರ್ಕಾ ರ ಕೊಡಲು ತಯಾರಿದ್ದೇವೆ. ನಾವು ಕೂಡ ಎದುರು ನೋಡು ತ್ತಿದ್ದೇವೆ ಎಂದರು.

ಮಧ್ಯಾಂತರ ಚುನಾವಣೆ ಬಗ್ಗೆ ಮಾತನಾಡುವುದಿಲ್ಲ ಎಂದ ಸುರೇಶ್ ಕುಮಾರ್, ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಅವರ ಕಳಕಳಿಯಿಂದಲೋ ಅಥವಾ ಜನರ ಗಮನ ಬೇರೆಡೆ ಸೆಳೆಯಲೋ ಗೊತ್ತಾಗುತ್ತಿಲ್ಲ ಎಂದು ಟೀಕಿಸಿದರು.

Key words:   coalition government -looks like – thorn –cloth-State BJP spokesperson -Suresh Kumar