Saturday, August 8, 2026

BDA Apartments

Home Front Page ಸಿಎಂ ಸಿದ್ಧರಾಮಯ್ಯ ಮನಸ್ಸು ಮಾಡಿ ಚಿಟಿಕಿ ಹೊಡೆದ್ರೆ ನೂರಲ್ಲ ಸಾವಿರ ಸೈಟ್ ಬರುತ್ತೆ- ಶಾಸಕ ಶಿವಲಿಂಗೇಗೌಡ

ಸಿಎಂ ಸಿದ್ಧರಾಮಯ್ಯ ಮನಸ್ಸು ಮಾಡಿ ಚಿಟಿಕಿ ಹೊಡೆದ್ರೆ ನೂರಲ್ಲ ಸಾವಿರ ಸೈಟ್ ಬರುತ್ತೆ- ಶಾಸಕ ಶಿವಲಿಂಗೇಗೌಡ

ಹಾಸನ, ಅಕ್ಟೋಬರ್,7,2024 (www.justkannada.in): ಸಿಎಂ ಸಿದ್ಧರಾಮಯ್ಯ ಮನಸ್ಸು ಮಾಡಿ ಚಿಟಿಕಿ ಹೊಡೆದ್ರೆ ನೂರಲ್ಲ ಸಾವಿರ ಸೈಟ್ ಬರುತ್ತವೆ. ರಾಜ್ಯದ ಮುಖ್ಯಮಂತ್ರಿ 14 ಸೈಟ್ ಗಳನ್ನು ತಗೋಬೇಕಾ? ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಮೋದಿಯನ್ನು ಎದುರಿಸಿ ಸಿದ್ದರಾಮಯ್ಯ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಆಪಾದನೆ ಮಾಡಿ ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದು ಎಂದು ಕುತಂತ್ರ ಮಾಡುತ್ತಿದ್ದಾರೆ. ಇದು ಬಿಜೆಪಿ ಜೆಡಿಎಸ್ ಅನಿಸುತ್ತಿರುವ ಕುತಂತ್ರ ಮತ್ತು ಷಡ್ಯಂತ್ರವಾಗಿದೆ ಎಂದು  ಕಿಡಿಕಾರಿದರು.

ಜಾತಿಗಣತಿ ವರದಿ ಸಿಎಂ ಸಿದ್ದರಾಮಯ್ಯನವರ ಕೈಸೇರಿದೆ. ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ ಸಂಪುಟಸಭೆಯಲ್ಲಿ ಸಮಗ್ರ ಚರ್ಚೆ ಮಾಡಿ ತೀರ್ಮಾನ ಕ್ಯಾಬಿನೆಟ್ ನಲ್ಲಿ ಈ ಬಗ್ಗೆ ಏನು ಬೇಕಾದರೂ ಆಗಬಹುದು ಸದ್ಯ ಚಂಡು ಕ್ಯಾಬಿನೆಟ್ ಅಂಗಳದಲ್ಲಿದೆ ಎಂದರು.

Key words: CM Siddaramaiah, sites, MLA,  Shivalingegowda