ಸಿದ್ಧರಾಮಯ್ಯ ಕುರ್ಚಿ ಬೀಳಿಸ್ತಾರೆ: ರಾಜ್ಯದಲ್ಲಿ ‘ಕೈ’ ಸರ್ಕಾರ ಹೆಚ್ಚು ದಿನ ಇರಲ್ಲ-ಕೆ.ಎಸ್ ಈಶ್ವರಪ್ಪ ಭವಿಷ್ಯ.

ಶಿವಮೊಗ್ಗ,ಜುಲೈ,22,2023(www.justkannada.in): ಸಿಎಂ ಸಿದ್ಧರಾಮಯ್ಯ ಕುರ್ಚಿಯನ್ನ ಅವರ ಪಕ್ಷದವರೇ ಬೀಳಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಇದೆ.  ಅವಧಿಗೂ ಮುನ್ನವೇ ಮತ್ತೆ ವಿಧಾನಸಭೆ ಚುನಾವಣೆ ಬರಬಹುದು. ಬಿ.ಕೆ.ಹರಿಪ್ರಸಾದ್ ಸೇರಿ ಹಲವರು ಕಾಂಗ್ರೆಸ್​ಗೆ ತಿರುಗಿ ಬೀಳಲಿದ್ದಾರೆ. ಇವರೆಲ್ಲರೂ ಸೇರಿಕೊಂಡು ಸಿದ್ದರಾಮಯ್ಯ ಕುರ್ಚಿ ಕಿತ್ತು ಹಾಕುತ್ತಾರೆ ಎಂದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಸಿಎಂ, ಡಿಸಿಎ, ಸಚಿವರು ರೈತರ ಮನೆಗೆ ಭೇಟಿ  ನೀಡುತ್ತಿಲ್ಲ.  ರಾಜ್ಯ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ  ಎಂದು ಕೆ.ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

Key words: CM-Siddaramaiah- congress government – not -long – state – KS Eshwarappa