Thursday, August 6, 2026

BDA Apartments

Home Front Page ಸಿಎಂ ಸ್ಥಾನಕ್ಕೆ ಲಾಬಿ ಮಾಡಿಲ್ಲ: ಬಿಎಸ್ ವೈ ರಾಜೀನಾಮೆಯಿಂದ ನೋವಾಗಿದೆ- ಮುರುಗೇಶ್ ನಿರಾಣಿ.

ಸಿಎಂ ಸ್ಥಾನಕ್ಕೆ ಲಾಬಿ ಮಾಡಿಲ್ಲ: ಬಿಎಸ್ ವೈ ರಾಜೀನಾಮೆಯಿಂದ ನೋವಾಗಿದೆ- ಮುರುಗೇಶ್ ನಿರಾಣಿ.

ಬೆಂಗಳೂರು,ಜುಲೈ,27,2021(www.justkannada.in):  ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆ ನನಗೂ ನೋವಾಗಿದೆ. ನಾನು ಸಿಎಂ ಸ್ಥಾನಕ್ಕೆ ಲಾಬಿ ಮಾಡಿಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.jk

ಇಂದು ಮಾಧ್ಯಮಗಳ ಜತೆ ಮಾತನಾಡಿದ ಮುರುಗೇಶ್ ನಿರಾಣಿ,  ಬಿಎಸ್ ವೈ ರಾಜೀನಾಮೆ ಘೋಷಣೆ ವೇಳೆ ನನ್ನ ಕಣ್ಣಂಚಲ್ಲೂ ನೀರು ತರಿಸಿದೆ. ಬಿಎಸ್ ವೈ ಓರ್ವ ಮಹಾನ್ ನಾಯಕ. ಅತಿ ಹೆಚ್ಚು ಶಾಸಕರನ್ನು ಬೆಳಸಿದವರು ಯಡಿಯೂರಪ್ಪ, ನಮ್ಮನ್ನು ಮಕ್ಕಳಂತೆ ನೋಡಿಕೊಂಡಿದ್ದಾರೆ. ಆದರೆ ಬಿಜೆಪಿಯಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಇಲ್ಲ. 75 ವರ್ಷ ದಾಟಿದವರಿಗೆ ಪಕ್ಷದಲ್ಲಿ ಅಧಿಕಾರ ನೀಡಲ್ಲ ಎಂಬುದು ಸಿದ್ಧಾಂತ. ಹೀಗಾಗಿ ಈಗ ಹೊಸ ನಾಯಕನ ಆಯ್ಕೆ ಸಂದರ್ಭ ಬಂದಿದೆ ಎಂದರು.

ಹಾಗೆಯೇ  ಸಿಎಂ ಸ್ಥಾನಕ್ಕಾಗಿ ನಾನು ಯಾವುದೇ ಲಾಬಿ ಮಾಡಿಲ್ಲ. ಬಿಜೆಪಿಯಲ್ಲಿ 120 ಶಾಸಕರು ಸಿಎಂ ಆಗಲು ಅರ್ಹರು. ಪರಿಸ್ಥಿತಿ ನಿಭಾಯಿಸುವ ಶಕ್ತಿ ಎಲ್ಲರಿಗೂ ಇದೆ. ನಾನು ಸಿಎಂ ಸ್ಥಾನಕ್ಕೆ ಲಾಬಿ ಮಾಡಿಲ್ಲ. ಈ ಹಿಂದೆಯೂ ಲಾಬಿ ನಡೆಸಿಲ್ಲ. ಮುಂದೆಯೂ ಮಾಡಲ್ಲ. ಕೆಲವರು ಸಿಎಂ ಸ್ಥಾನಕ್ಕೆ ನನ್ನ ಹೆಸರು ಹೇಳಿದ್ದಾರೆ. ಅದು ನನ್ನ ಮೇಲಿನ ಅಭಿಮಾನವಷ್ಟೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

Key words: CM –position-BS Yeddyurappa- resignation- hurts – Murugesh Nirani