ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ- ಮಾಜಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು,ಜುಲೈ,28,2021(www.justkannada.in): ರಾಜ್ಯದಲ್ಲಿ ಸಿಎಂ ಬದಲಾಗಿದ್ದಾರೆಯೇ ಹೊರತು ಪಕ್ಷವಲ್ಲ.ಈಗಲೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ ಎಂದು ಮಾಜಿ ಸಚಿವ ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.jk

ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನ ಇಂದು ಭೇಟಿ ಮಾಡಿ ಶುಭಕೋರಿದ  ಮಾಜಿ ಸಚಿವ ಬಿ.ಸಿ.ಪಾಟೀಲ್,ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಹೊಸ ಸಿಎಂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿಯೇ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪ ಬಿಜೆಪಿಯಲ್ಲಿಯೇ ಇದ್ದಾರೆ. ಪಕ್ಷ‌ಸಂಘಟನೆಗೆ ಯಡಿಯೂರಪ್ಪನವರ ಮಾರ್ಗದರ್ಶನವಿದೆ. ಮುಂದೆಯೂ ಕೂಡ ಬಿಜೆಪಿಯೇ ಆಡಳಿತಕ್ಕೆ ಬರುತ್ತದೆ. ನಾವು ಮಂತ್ರಿಯಾಗಿ ಮುಂದುವರೆಯುತ್ತೇವೋ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪ ಅವರ ಮಾರ್ಗದರ್ಶನ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗೆಂದ ಮಾತ್ರಕ್ಕೆ ಅದು ಶಾಡೋ ಎಂದು ಭಾವಿಸುವುದು ತಪ್ಪು. ಯಡಿಯೂರಪ್ಪ ಹಿರಿಯರು ಅನುಭವಿಗಳು ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅದರಂತೆ ಅವರು ನಡೆಯುತ್ತಾರೆ ಎಂದರು.

ನಾವು ಸಚಿವ ಸ್ಥಾನಕ್ಕಾಗಿ ಯಾರ ಮೇಲೂ ಒತ್ತಡ ತರುವುದಿಲ್ಲ. ಬೆಂಗಳೂರು ನಂಬಿ ಬಂದಿದ್ದೇವೆ‌.ದೆಹಲಿ ವರಿಷ್ಠರು ಆಶೀರ್ವಾದ ಮಾಡುತ್ತಾರೆಂದು ಬಿಸಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ENGLISH SUMMARY….

“Only the Chief Minister has changed not the party”: Former Minister B.C. Patil
Bengaluru, July 28, 2021 (www.justkannada.in): “Only the Chief Minister has changed in the state, not the party. It is still the BJP that is in power in the state,” opined former minister and Hirekeruru MLA B.C. Patil.
He visited the newly nominated CM Basavaraj Bommai and wished him all the best. Later speaking to the press reporters he said, “the new CM has been selected under the guidance of the outgoing CM B.S. Yediyurappa. The party will continue having the guidance of Yediyurappa. BJP will come to power again in the state. I don’t know whether I will remain a minister or not. It is left to the Chief Minister and the party leaders to decide. But Yediyurappa’s guidance will continue as before, and it is wrong to consider it as a shadow. B.S. Yediyurappa is a very senior and experienced politician. Basavaraj Bommai has also informed us that all of us will work under the guidance of B.S. Yediyurappaji,” he explained.
“Nobody of us is putting pressure to get a ministerial berth. We have come to Bengaluru with trust. However, we have faith in the BJP National leaders,” B.C. Patil said.
Keywords: former minister B.C. Patil/ Chief Minister has changed/ not party

Key words: CM – change –not-party- Former Minister -B.C. Patil