Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Cinema ಜುಲೈ 29 ರಂದು ಕೆಜಿಎಫ್’ನ ‘ಅಧೀರ’ ಅವತಾರ ರಿಲೀಸ್ ಸಾಧ್ಯತೆ

ಜುಲೈ 29 ರಂದು ಕೆಜಿಎಫ್’ನ ‘ಅಧೀರ’ ಅವತಾರ ರಿಲೀಸ್ ಸಾಧ್ಯತೆ

ಬೆಂಗಳೂರು, ಜುಲೈ  28, 2021 (www.justkannada.in): ಇದೇ ತಿಂಗಳ 29 ರಂದು ಅಧೀರ ಅವತಾರಿ ನಟ ಸಂಜಯ್ ದತ್  62ನೇ ವಸಂತಕ್ಕೆ ಕಾಲಿಡಲಿದ್ದಾರೆ.

ವಿಶೇಷ ಬರ್ತ್ ಡೇ ಅಲ್ಲ. ಕೆಜಿಎಫ್ ನಲ್ಲಿ ಸಂಜಯ್ ದತ್ತ ಅವತಾರ ನೋಡುವ ಅವಕಾಶ ಸಿಗುತ್ತಾ ಎಂಬುದು!

ಹೌದು. ಕಳೆದ ವರ್ಷ ಸಂಜು ಬಾಬಾ ಅವರ ಹುಟ್ಟುಹಬ್ಬದಂದು ರಗಡ್ ಲುಕ್ ಅನಾವರಣಗೊಳಿಸಿ ಸರ್​ಪ್ರೈಸ್ ನೀಡಿದ್ದ ನಿರ್ದೇಶಕ ಪ್ರಶಾಂತ್ ನೀಲ್, ಈ ಬಾರಿ ಟೀಸರ್​ವೊಂದನ್ನು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಪ್ರಶಾಂತ್ ನೀಲ್, ‘ಅಧೀರ’ ಪಾತ್ರದ ಪೋಸ್ಟರ್ ಹಾಗೂ ಸಣ್ಣ ವಿಡಿಯೋ ತುಣುಕು ಪ್ರದರ್ಶಿಸಿ ಕೆಜಿಎಫ್ ರಿಲೀಸ್ ಮಾಡಿತ್ತು. ಇದೀಗ ಜುಲೈ 29 ರಂದು ಅಧೀರನ ಮತ್ತೊಂದು ಮುಖ ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಜಿಎಫ್ ಚಾಪ್ಟರ್-2ನಲ್ಲಿ ಅಧೀರನಿಗಾಗಿ ವಿಶೇಷ ಹಾಡೊಂದನ್ನು ಸಂಯೋಜಿಸಲಾಗಿದ್ದು, ಈ ಹಾಡಿನ ಸಣ್ಣ ಟೀಸರ್​ನ ಮೂಲಕ ಸಂಜು ಬಾಬಾನಿಗೆ ಬರ್ತ್​ಡೇ ಗಿಫ್ಟ್ ನೀಡಲು ಪ್ರಶಾಂತ್ ನೀಲ್ ಅಯಂಡ್ ಟೀಮ್ ಪ್ಲ್ಯಾನ್ ಹಾಕಿಕೊಂಡಿದೆ ಎನ್ನಲಾಗಿದೆ.