ಸರ್ಕಾರ ಉಳಿಸಿಕೊಳ್ಳಲು ಕಳಂಕಿತರ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ- ಡಿ.ಕೆ ಶಿವಕುಮಾರ್ ಆರೋಪ.

ಬೆಂಗಳೂರು,ಸೆಪ್ಟಂಬರ್,13,2022(www.justkannada.in): ಸರ್ಕಾರವನ್ನ ಉಳಿಸಿಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಕಳಂಕಿತರನ್ನ ಕಾಪಾಡುತ್ತಿದ್ದಾರೆ. ಅವರ ಬೆನ್ನಿಗೆ ನಿಂತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್,  ಪಿಎಸ್ ಐ ನೇಮಕಾತಿ ಹಗರಣ ಸಂಬಂಧ ಕನಕಗಿರಿ ಶಾಸಕ ಸರ್ಕಾರಕ್ಕೆ 15 ಲಕ್ಷ ಕೊಟ್ಟಿದ್ದೀನಿ ಅಂತಾರೆ. ಪ್ರಿಯಾಂಕ್  ಖರ್ಗೆ ಪ್ರಶ್ನಿಸಿದರೇ ಅವರಿಗೆ ನೋಟಿಸ್ ಕೊಟ್ಟು ಹೆದರಿಸುತ್ತೀರಾ.  ಸಿಎಂಹುದ್ದೆಗೆ 2500 ಕೋಟಿ ಕೊಡಬೇಕು ಎಂದು ಬಿಜೆಪಿ ಶಾಸಕ ಯತ್ನಾಳ್ ಅವರೇ ಹೇಳುತ್ತಿದ್ದರು.  ಯತ್ನಾಳ್ ಗೆ ಯಾಕೆ ನೋಟಿಸ್  ಕೊಟ್ಟು ವಿಚಾರಣೆಗೆ ಕರೆದಿಲ್ಲ ಕೆ.ಎಸ್ ಈಶ್ವರಪ್ಪ, ರಮೇಶ್ ಜಾರಕಿಹಳೀ ಮೇಲೆ ಆರೋಪ ಬಂದರೂ ಕ್ರಮ ವಹಿಸಲಿಲ್ಲ. ಸರ್ಕಾರ ಉಳಿಸಿಕೊಳ್ಳಲು ಕಳಂಕಿತರನ್ನ ಕಾಪಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಈಗ ನಮ್ಮ ಮೇಲೂ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಏನೋ ಧಮ್ ಬಗ್ಗೆ ಮಾತನಾಡುತ್ತಿದ್ದರು . ಕಳದ 3 ವರ್ಷದಿಂದ ತನಿಖೆ ಮಾಡಿಸದೇ ಏನು ಮಾಡುತ್ತಿದ್ದರು. ಈಗ ಏನೋ ಸಿಎಂ ಬೊಮ್ಮಾಯಿಗೆ ಧಮ್ ಬಂದಿಬಿಟ್ಟಿದೆ ಎಂದು ವ್ಯಂಗ್ಯವಾಡಿದರು.

ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಳವಾಗಿದೆ ಶೇ. 30 ರಷ್ಟು ತೆರಿಗೆ ಕಟ್ಟೋದು ಬೆಂಗಳೂರು ಜನತೆ. ಸಬ್ ಅರ್ಬನ್ ರೈಲು ಯೋಜನೆ ಘೋಷಿಸಿದ್ದೀರಿ ಅದು ಏನಾಯಿತು. ಎಲ್ಲಾ ಹುದ್ದೆಗೂ ಒಂದೊಂದು ರೇಟ್ ಫಿಕ್ಸ್ ಆಗಿಬಿಟ್ಟಿದೆ ಎಂದು ಡಿ.ಕೆ ಶಿವಕುಮಾರ್ ಹರಿಹಾಯ್ದರು.

Key words: CM Bommai- government – kpcc-president-DK Shivakumar