ಮುಂದಿನ ಚುನಾವಣೆಯಲ್ಲಿ 130ರಿಂದ 140 ಸ್ಥಾನ ಗೆಲ್ಲುವ ಗುರಿ- ಮಾಜಿ ಸಿಎಂ ಹೆಚ್.ಡಿಕೆ ವಿಶ್ವಾಸ.

ಹಾಸನ,ಸೆಪ್ಟಂಬರ್,13,2022(www.justkannada.in):  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 130-140 ಸ್ಥಾನ ಗೆಲ್ಲುವ ವಿಶ್ವಾಸವಿದೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದರು.

ಹಾಸನದಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, . ಮುಂದಿನ ಚುನಾವಣೆಯಲ್ಲಿ 130ರಿಂದ 140 ಸ್ಥಾನ ಗೆಲ್ಲುತ್ತೇವೆ. ನನ್ನ ಜನ್ಮ ಭೂಮಿಯಿಂದ ಸವಾಲು ಸ್ವೀಕರಿಸಿ ಹೊರಟಿದ್ದೇನೆ. ಅಧಿಕಾರ ಇರಲಿ ಇಲ್ಲದಿರಲಿ, ನಾವು ಬಡ ರೈತನ ಮಕ್ಕಳು. ಹಾಸನ ರಾಜಕಾರಣದಲ್ಲಿ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ನಿಮ್ಮ ಮನೆ ಮಕ್ಕಳು ತಪ್ಪುಮಾಡಿದ್ರೆ ನೀವು ಕ್ಷಮಿಸಲ್ಲವೇ? ನಾನು ಈ ಜಿಲ್ಲೆಯ ಮಣ್ಣಿನಲ್ಲಿ ಜನ್ಮ ಪಡೆದವನು. ರಾಮನಗರ ಜಿಲ್ಲೆ ಜನ ನನಗೆ ರಾಜಕೀಯ ಜನ್ಮ ಕೊಟ್ಟಿದ್ದಾರೆ. ನನ್ನ ದುಡಿಮೆ ಈ ಜಿಲ್ಲೆಯ ಜನರಿಗೆ ಸಲ್ಲಿಸುವ ಗೌರವ. ನಮ್ಮಿಂದ ತಪ್ಪಾಗಿದ್ರೆ ಕ್ಷಮಿಸಿ, ಕ್ಷಮಿಸುವ ಅಧಿಕಾರ ನಿಮಗಿದೆ ಎಂದರು.

ಹೆಚ್​.ಡಿ.ರೇವಣ್ಣ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ತಾರೆ. ಹೆಚ್​.ಡಿ.ರೇವಣ್ಣ ಸಿಡುಕಿನಿಂದ ಮಾತನಾಡುವ ವ್ಯಕ್ತಿ ಅಷ್ಟೇ. ಆದರೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸದಾ ಆಲೋಚಿಸುವ ವ್ಯಕ್ತಿ ಎಂದು ಹೆಚ್.ಡಿಕೆ ಹೇಳಿದರು.

Key words: target – win 130 -140 seats – next election-Former CM-HDK