ಕಾಡಾನೆ ದಾಳಿಗೆ ರೈತ ಬಲಿ.   

ಹಾಸನ,ಆಗಸ್ಟ್,8,2022(www.justkannada.in):  ಕಾಡಾನೆ ದಾಳಿಗೆ ರೈತ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ ಮೇಲಕೆರೆ  ಗ್ರಾಮದಲ್ಲಿ ನಡೆದಿದೆ. ಕೆಂಪಣ್ಣ ಆನೆ ದಾಳಿಗೆ ಬಲಿಯಾ ರೈತ. ಗದ್ಧೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕೆಂಪಣ್ಣ ಮೇಲೆ ಕಾಡಾನೆ ದಾಳಿ ನಡೆಸಿದ್ದು, ರೈತ ಕೆಂಪಣ್ಣ ಸಾವನ್ನಪ್ಪಿದ್ದಾರೆ. ಇನ್ನು ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Farmer –death- elephant-attack.