ವಿದ್ಯಾರಣ್ಯಪುರಂನ ಶ್ರೀಚಾಮುಂಡೇಶ್ವರಿ-ಶ್ರೀಕರುಮಾರಿಯಮ್ಮ 92ನೇ ಕರಗ ಮಹೋತ್ಸವ

ಮೈಸೂರು, ಆಗಸ್ಟ್ 07, 2022 (www.justkannada.in): ಮೈಸೂರಿನ ವಿದ್ಯಾರಣ್ಯಪುರಂ ನ ಶ್ರೀಚಾಮುಂಡೇಶ್ವರಿ ಮತ್ತು ಶ್ರೀಕರುಮಾರಿಯಮ್ಮನವರ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀಚಾಮುಂಡೇಶ್ವರಿ ಮತ್ತು ಶ್ರೀಕರುಮಾರಿಯಮ್ಮನವರ 92ನೇ ವರ್ಷದ ಕರಗ ಮಹೋತ್ಸವ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆಗಸ್ಟ್ 4ರಿಂದ ಪ್ರಾರಂಭವಾಗಿ ಆಗಸ್ಟ್ 7ರವರೆಗೆ ನಡೆಯುವ ಈ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿದಿನವೂ ಅಮ್ಮನವರ ಕರಗವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಭಕ್ತರಿಂದ ಪೂಜೆ ಸ್ವೀಕರಿಸಿ ನಂತರ ದೇವಸ್ಥಾನವನ್ನು ತಲುಪುತ್ತಿತ್ತು. ದೇವಸ್ಥಾನದ ಆವರಣದಲ್ಲಿ ಅಮ್ಮನವರ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಬರುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಪ್ರಸಾದ ವಿತರಣೆಯನ್ನು ಮಾಡಲಾಗುತ್ತಿತ್ತು.

ಈ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದು ಶ್ರೀಚಾಮುಂಡೇಶ್ವರಿ ಅಮ್ಮನವರ ಮತ್ತು ಕರುಮಾರಿಯಮ್ಮನವರ ವೈಭವವಾದ ಕರಗ ಉತ್ಸವವನ್ನು ಭವ್ಯವಾದ ಹೂವಿನ ಅಲಂಕೃತ ಮಂಟಪದೊಂದಿಗೆ,ಅನೇಕ ಸಾಂಸ್ಕೃತಿಕ ಮತ್ತು ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ, ರಾಜಬೀದಿಗಳಲ್ಲಿ ಮೆರವಣಿಗೆಯನ್ನು  ನಡೆಸಲಾಯಿತ್ತು.

ಶ್ರೀಚಾಮುಂಡೇಶ್ವರಿ ಮತ್ತು ಶ್ರೀಕರುಮಾರಿಯಮ್ಮನವರ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷರಾದ ಸತ್ಯನಾರಾಯಣ ಸ್ವಾಮಿ, ಉಪಾಧ್ಯಕ್ಷರಾದ ಎಸ್.ಎನ್.ಪುರುಷೋತ್ತಮ, ಕಾರ್ಯದರ್ಶಿ ರಘುನಾಥ್,ಖಜಾಂಚಿ ಎಂ.ಸುಬ್ರಹ್ಮಣ್ಯಂ, ಮುರುಘಾ ಮೆಡಿಕಲ್ಸ್ ಸ್ಟೋರ್ ನ ನರೇಂದ್ರ ಬಾಬು ಸೇರಿದಂತೆ ಟ್ರಸ್ಟ್ ನ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.