Friday, August 7, 2026

BDA Apartments

Home Front Page ಭ್ರಷ್ಟಾಚಾರದಲ್ಲಿ ಸಿಎಂ ಹಾಗೂ ಕುಟುಂಬ ನೇರ ಭಾಗಿ: ರಾಜೀನಾಮೆ ನಿಶ್ಚಿತ- ಬಿವೈ ವಿಜಯೇಂದ್ರ

ಭ್ರಷ್ಟಾಚಾರದಲ್ಲಿ ಸಿಎಂ ಹಾಗೂ ಕುಟುಂಬ ನೇರ ಭಾಗಿ: ರಾಜೀನಾಮೆ ನಿಶ್ಚಿತ- ಬಿವೈ ವಿಜಯೇಂದ್ರ

ಬೆಂಗಳೂರು,ಸೆಪ್ಟಂಬರ್,10,2024 (www.justkannada.in): ಭ್ರಷ್ಟಾಚಾರದಲ್ಲಿ ಸಿಎಂ ಹಾಗೂ ಕುಟುಂಬ ನೇರವಾಗಿ ಭಾಗಿಯಾಗಿದ್ದು ಸಿಎಂ ಸಿದ್ದರಾಮಯ್ಯ ನಿಶ್ಚಿತವಾಗಿ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಯಾವುದೇ ಸಂದರ್ಭದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬಹುದು. ಸಿದ್ಧರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.  ಹೈಕೋರ್ಟ್ ನಲ್ಲಿ ಮುಡಾ ಪ್ರಕರಣ ವಿಚಾರಣೆ ನಡೆಯುತ್ತಿದೆ. ಮೊದಲು ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿಲ್ಲ ಎಂದರು. ನಂತರ ಸದನದಲ್ಲಿ ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಒಪ್ಪಿಕೊಂಡರು. ಅದೇ ರೀತಿ ಮುಡಾದಲ್ಲೂ ಹಗರಣ ನಡೆದಿಲ್ಲ ಎಂದರು.  ಆದರೆ ಈಗ ಮೂಡಾ ಆಯುಕ್ತರನ್ನ ಅಮಾನತು ಮಾಡಿದ್ದಾರೆ ಎಂದು ಕಿಡಿಕಾರಿದರು.

ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದರು.  ಆದರೆ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತಿಲ್ಲ. ಭ್ರಷ್ಟಾಚಾರದಲ್ಲಿ ಸಿಎಂ ಹಾಗೂ ಕುಟುಂಬ ನೇರ ಭಾಗಿಯಾಗಿದ್ದಾರೆ.  ಸಿಎಂ ನಿಶ್ಚಿತವಾಗಿ ರಾಜೀನಾಮೆ ನೀಡುತ್ತಾರೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.

Key words: CM and family, involved, corruption, BY Vijayendra