Saturday, October 17, 2026

Dasara Wishes

Happy Dasara
Home Front Page ರಾಜಕಾಲುವೆ ತೆರವಿಗೆ ನಮ್ಮ ಕಾಲದಲ್ಲಿ ಕ್ರಮ: ಈಗಿನ ಸರ್ಕಾರ ಏನು ಮಾಡಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ.

ರಾಜಕಾಲುವೆ ತೆರವಿಗೆ ನಮ್ಮ ಕಾಲದಲ್ಲಿ ಕ್ರಮ: ಈಗಿನ ಸರ್ಕಾರ ಏನು ಮಾಡಿಲ್ಲ-ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪ.

ಬೆಂಗಳೂರು,ಸೆಪ್ಟಂಬರ್,8,2022(www.justkannada.in): ಬೆಂಗಳೂರಿನಲ್ಲಿ ರಾಜಕಾಲುವೆ ತೆರವಿಗೆ ನಮ್ಮ ಕಾಲದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗಿನ ಸರ್ಕಾರ ಮೂರು ವರ್ಷದಿಂದ  ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ  ಸಿದ್ಧರಾಮಯ್ಯ ಆರೋಪ ಮಾಡಿದರು.

ಬೆಂಗಳೂರಿನ ಮಳೆಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ ಬಡಾವಣೆ, ಎಪ್ಸಿಲಾನ್ ಲೇ ಔಟ್ ಗೆ ಭೇಟಿ ನೀಡಿ ವೀಕ್ಷಿಸಿದರು. ಇದೀಗ ರೈನ್ ಬೋ ಲೇಔಟ್ ನಲ್ಲಿ ವೀಕ್ಷಣೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವು ರಾಜಕಾಲುವೆ ತೆರವುಗೊಳಿಸಲು ನಮ್ಮ ಕಾಲದಲ್ಲಿ ಕ್ರಮ ಕೈಗೊಂಡಿದ್ವು ಈಗಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.  ಅಕ್ರಮ ಮನೆ ಕಟ್ಟಿದವರ ವಿರುದ್ಧ ಕ್ರಮ ಆಗಬೇಕು. ಸಿಎಂ ಹೇಳ್ತಾರೆ ಹಿಂದಿನ ಸರ್ಕಾರ ಕಾರಣ ಅಂತಾ . ಆದರೆ ಅವರೇನು ಮಾಡಿದ್ದಾರೆ ಎಂದು ಹೇಳಬೇಕಲ್ವಾ  ನಾವೇನು ಮಾಡಿದ್ದೇವೆ ಅಂತಾ ಜನರಿಗೆ ಹೇಳಬೇಕಲ್ವಾ. ಮೂರು ವರ್ಷದಿಂದ ಈ ಸರ್ಕಾರ ಏನು ಮಾಡಿಲ್ಲ. ಹೀಗಾಗಿ ನಮ್ಮ ಮೇಳೆ ಆರೋಪ ಮಾಡುತ್ತಿದ್ದಾರೆ.  ರಾಜಕಾಲುವೆ ಒತ್ತುವರಿ ಮಾಡಲು ಯಾರು ಕಾರಣ. ಇದನ್ನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

Key words: clear –rajakaluve- present-government – not done-Former CM -Siddaramaiah