ಜನರು ಕಷ್ಟದಲ್ಲಿದ್ದಾಗ ಸಿದ್ಧರಾಮಯ್ಯ ಲಾಭ ಪಡೆಯುವ ಕೆಲಸ ಮಾಡಬಾರದು- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಸೆಪ್ಟಂಬರ್,8,2022(www.justkannada.in): ಬೆಂಗಳೂರಿನಲ್ಲಿ ಮಳೆಯಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಲಾಭ ಪಡೆಯುವ ಕೆಲಸವನ್ನ ಸಿದ್ಧರಾಮಯ್ಯ ಮಾಡಬಾರದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ವಿಪಕ್ಷ ಸಿದ್ಧರಾಮಯ್ಯ ನೆರೆ ಹಾನಿ ಪ್ರದೇಶಕ್ಕೆ ಭೇಟಿ ಬೆನ್ನಲ್ಲೆ ಗೃಹ ಸಚಿವ ಅರಗ ಜ್ಞಾನೇಂದ್ರ ಸಹ ನೆರೆಹಾನಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರಕೃತಿ ವಿಕೋಪವಾಗಿದೆ. ಬಹಳಷ್ಟು ಮನೆಗಳು ಜಲಾವೃತವಾಗಿವೆ. ಮಳೆಗೆ ಅನೇಕ ಕುಟಂಬಗಳು ಕಷ್ಟ ಅನುಭವಿಸಿದ್ದಾರೆ.

ಜನರು ಕಷ್ಟದಲ್ಲಿದ್ದಾಗ ರಾಜಕೀಯ ಮಾಡಬಾರದು. ಲಾಭ ಪಡೆಯುವ ಕೆಲಸ ಸಿದ್ಧರಾಮಯ್ಯ ಮಾಡಬಾರದು. ಸರ್ಕಾರಕ್ಕೆ ಸಿದ್ಧರಾಮಯ್ಯ ಸಲಹೆ ಕೊಡಬೇಕು ಎಂದು ಹೇಳಿದರು.

Key words: Siddaramaiah – advantage –people-rain-Home Minister –Araga jnanendra.