ಬಿಂದಾಸ್ ವ್ಯಕ್ತಿ. ನನ್ನ ಮಿತ್ರ ಈಗ ಇಲ್ಲ: ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ- ಉಮೇಶ್ ಕತ್ತಿ ನಿಧನಕ್ಕೆ ಅರುಣ್ ಸಿಂಗ್ ಕಂಬನಿ.

ಬೆಳಗಾವಿ,ಸೆಪ್ಟಂಬರ್,8,2022(www.justkannada.in): ಹೃದಯಾಘಾತದಿಂದ ನಿಧನರಾದ ಆಹಾರ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನಿನ್ನೆ ನೆರವೇರಿದ್ದು ಇಂದು ಬೆಳಗಾವಿಗೆ ಭೇಟಿ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಂಬನಿ ಮಿಡಿದಿದ್ದಾರೆ.

ಉಮೇಶ್ ಕತ್ತಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಿಜೆಪಿ ನಾಯಕರು ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್,  ಬಿಂದಾಸ್ ವ್ಯಕ್ತಿ. ನನ್ನ ಮಿತ್ರ ಈಗ ಇಲ್ಲ. ದೆಹಲಿ ಬೆಂಗಳೂರಿನಲ್ಲಿ ಸಿಕ್ಕಾಗ ಗಂಟೆಗಟ್ಟಲೇ ಚರ್ಚಿಸುತ್ತಿದ್ದವು,  ಪಕ್ಷವನ್ನು ಹೇಗೆ ಬಲಪಡಿಸಬೇಕೆಂದು ಉಮೇಶ್ ಕತ್ತಿ ಹೇಳುತ್ತಿದ್ಧರು.

ಉಮೇಶ್ ಕತ್ತಿ ನಿಧನ ಬಿಜೆಪಿ ಪಕ್ಷ ಕರ್ನಾಟಕಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಕತ್ತಿ ಏಕಾಏಕಿ ನಮ್ಮನ್ನ ಅಗಲಿದ್ದಾರೆ.   ಭಗವಂತ ಅವರ ಆತ್ಮಕ್ಕೆ  ಶಾಂತಿ ನೀಡಲಿ.  ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅರುಣ್ ಸಿಂಗ್ ನುಡಿದರು.

Key words:  bjp-Arun Singh –condolence-death – Umesh Katti.