ಪ್ರವಾಹದಲ್ಲಿ ಸಿಲುಕಿದ್ಧ ಜನರನ್ನ ರಕ್ಷಿಸಲು ಹೋದ ಅಗ್ನಿಶಾಮಕ ಸಿಬ್ಬಂದಿ ಬೋಟ್ ಪಲ್ಟಿ.

ಬಳ್ಳಾರಿ, ಸೆಪ್ಟಂಬರ್,8,2022(www.justkannada.in):  ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಯ ಬೋಟ್ ಪಲ್ಟಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಡೆದಿದೆ.

ಮುದೇನೂರು ಗ್ರಾಮದ ಶನೀಶ್ವರ ದೇವಸ್ಥಾನ ಮುಳುಗಡೆ ಆಗಿತ್ತು. ದೇವಸ್ಥಾನದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ತೆರಳಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದ ಬೋಟ್ ಪಲ್ಟಿಯಾಗಿದೆ.  ಬೋಟ್ ಪಲ್ಟಿ ಆದರೂ ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ ದೇವಸ್ಥಾನಕ್ಕೆ ಪೂಜಾರಿ ಹಾಗೂ ಭಕ್ತರು ಪೂಜೆಗೆ ತೆರಳಿದ್ದರು. ಈ ವೇಳೆ ಸಿಲುಕಿದ್ದು ಇದೀಘ ದೇವಸ್ಥಾನದಲ್ಲಿ ಸಿಲುಕಿದ್ದವರನ್ನ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: ballari- boat – rescue – people – flood