ಬೆಂಗಳೂರಿನಲ್ಲಿ ಮಳೆಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ, ಪರಿಶೀಲನೆ.

ಬೆಂಗಳೂರು,ಸೆಪ್ಟಂಬರ್,8,2022(www.justkannada.in):  ರಾಜ್ಯ ರಾಜಧಾನಿ ಬೆಂಗಳೂರು ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದು , ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಬಡಾವಣೆಗಳು ಜಲಾವೃತಗೊಂಡು ಜನರು ತತ್ತರಿಸಿದ್ದಾರೆ.

ಈ ನಡುವೆ ಇಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸಿಟಿ ರೌಂಡ್ಸ್ ಹಾಕುತ್ತಿದ್ದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪ್ಸಿಲಾನ್ ಲೇ ಔಟ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಮಳೆ ಹಾನಿ ವೀಕ್ಷಣೆ ಮಾಡಿದ್ದಾರೆ. ಎಪ್ಸಿಲಾನ್ ಲೇಔಟ್ ನಲ್ಲಿ 4 ರಿಂದ 5 ಅಡಿಗಳಷ್ಟು ನೀರು ನಿಂತಿದ್ದು,  ಬೋಟ್ ಮೂಲಕ ಸಿದ್ಧರಾಮಯ್ಯ ತೆರಳಿ ಪರಿಶೀಲನೆ ನಡೆಸಿದರು.

ಬೆಂಗಳೂರಿನಲ್ಲಿಇನ್ನೂ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು,  ಹವಮಾನ ಇಲಾಖೆ 18 ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಿದೆ.

Key words: Former CM –Siddaramaiah-visits- rain -damaged -area -Bengaluru