ಸ್ವಚ್ಚತೆ, ಶುದ್ಧ ನೀರು ಕೊಡದಿದ್ದರೇ ದೂರು ದಾಖಲಿಸುವ ಎಚ್ಚರಿಕೆ: ಮೈಸೂರು ಡಿಸಿಯಿಂದ ಆರೋಗ್ಯದ ಬಗ್ಗೆ ಜಾಗೃತಿ.

ಮೈಸೂರು,ಮೇ,23,2024 (www.justkannada.in): ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಓರ್ವ ಸಾವು ಮತ್ತು ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಮೈಸೂರು ಡಿ.ಸಿ.ರಾಜೇಂದ್ರ ಅವರು ಮಾರ್ಗದರ್ಶಿ ಬಿಡುಗಡೆ ಮಾಡಿದ್ದು ಈ ಮೂಲಕ  ಸಾರ್ವಜನಿಕರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ವೇಳೆ ಕೆಲ ಸಲಹೆಗಳನ್ನ ನೀಡಿದ್ದಾರೆ.

ಎಲ್ಲರೂ ಕಡ್ಡಾಯವಾಗಿ ಕುದಿಸಿ ಆರಿಸಿದ ನೀರು ಕುಡಿಯಿರಿ, ಬೀದಿ ಬದಿಯ ವ್ಯಾಪಾರಿಗಳು ಸ್ವಚ್ಛತೆ ಕಾಪಾಡಬೇಕು. ಕಡ್ಡಾಯವಾಗಿ ಶುದ್ಧ ನೀರು ನೀಡಲೇಬೇಕು. ಶುದ್ಧ‌ನೀರು ನೀಡದಿದ್ದರೆ ದೂರು ದಾಖಲಿಸಲಾಗುತ್ತದೆ ಎಂದು  ಎಚ್ಚರಿಕೆ ನೀಡಿದ್ದಾರೆ.

ನಗರ ಹಾಗೂ ಗ್ರಾಮೀಣ ಭಾಗದ ಹೋಟೆಲ್ ಗಳಲ್ಲಿ ಬಿಸಿ ನೀರು ಕೊಡಬೇಕು. ವಾಂತಿ- ಭೇದಿ ಕಾಣಿಸಿಕೊಂಡಾಗ ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ. ನಿರ್ಜಲೀಕರಣ ಉಂಟಾದ ಸಂದರ್ಭದಲ್ಲಿ ORS ಪ್ಯಾಕೇಟ್ ಬಳಸಿ. ಮಹಾನಗರ ಪಾಲಿಕೆ, ನಗರಪಾಲಿಕೆ, ಪಟ್ಟಣ ಪಂಚಾಯ್ತಿ, ಟೌನ್ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಪಂ ವ್ಯಾಪ್ತಿ ನೀರು ಕಲುಷಿತಗೊಳ್ಳದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿ. ಎಂಜಿನಿಯರ್ ಗಳು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಕ್ರಮಕೈಗೊಳ್ಳಿ ಎಂದು ಎಚ್ಚರಿಕೆ ನೀಡಿದರು.

Key words: Cleanliness, Mysore, DC, awareness, health