ಮೊಬೈಲ್ ಕಸಿದು ಮರವೇರಿದ ಕಪಿರಾಯ: ಕೋತಿಚೇಷ್ಠೆಗೆ ಭಕ್ತರ ಪರದಾಟ.

ಮೈಸೂರು ,ಮೇ,23,2024 (www.justkannada.in): ತಾಯಿಚಾಮುಂಡೇಶ್ವರಿ ದರ್ಶನ ಪಡೆಯಲು ಬಂದಿದ್ದ ಭಕ್ತರೊಬ್ಬರ ಮೊಬೈಲ್ ಅನ್ನು ಕಪಿರಾಯ ಕಸಿದು ಮರವೇರಿ ತನ್ನ ಚೇಷ್ಟೆ ತೋರಿದ ಪ್ರಸಂಗ ಚಾಮುಂಡಿ ಬೆಟ್ಟದಲ್ಲಿ ನಡೆದಿದೆ.

ಹಾಸನದಿಂದ ಬಂದಿದ್ದ ಭಕ್ತರೊಬ್ಬರು ಚಾಮುಂಡಿ ಬೆಟ್ಟದ ಮೆಟ್ಟಿಲು ಹತ್ತಿ ತಾಯಿ ಚಾಮುಂಡಿ ದರ್ಶನಕ್ಕೆ ತೆರಳುತ್ತಿದ್ದರು. ಮೆಟ್ಟಿಲು ಮಾರ್ಗದ ಪಾದದ ಬಳಿಯ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಹಿಳೆಯ ಕೈಲಿದ್ದ ಪರ್ಸ್ ಅನ್ನು ಕೋತಿ ಕಸಿದುಕೊಂಡು ಮರವೇರಿದೆ.

ನಂತರ ಪರ್ಸ್ ನಲ್ಲಿದ್ದ ಒಂದೊಂದೇ ವಸ್ತುಗಳನ್ನ ಬಿಸಾಡಿದ್ದು, ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಭಕ್ತರನ್ನ ಪರದಾಡುವಂತೆ ಮಾಡಿದೆ. ಬಳಿಕ ಉಪಾಯ ಹುಡುಕಿ ಬಾಳೆಹಣ್ಣಿನ ಆಮಿಷ ಒಡ್ಡಿದರೂ ವಾನರ ಮೊಬೈಲ್ ಬಿಡಲೊಲ್ಲಲಿಲ್ಲ. ಸುಮಾರು ಅರ್ಧಗಂಟೆ ಕಾಲ ಇದೇ ರೀತಿ ಚೇಷ್ಠೆ ಮುಂದುವರೆಸಿದ ಕೋತಿ ಕೊನೆಗೆ ಮೊಬೈಲ್ ಬಿಸಾಡಿದೆ. ಮೊಬೈಲ್ ಪಡೆದ ನಂತರ ಭಕ್ತರು ನಾಡದೇವಿ ದರ್ಶನಕ್ಕೆ ತೆರಳಿದರು.

Key words:  Chamundi hills, Devotees, monkey