100 ಮಿಲಿಯನ್ ದಾಟಿದ ಕನ್ನಡದ ಮೊದಲ ಹಾಡು ‘ಚುಟು ಚುಟು..’

ಬೆಂಗಳೂರು, ಜನವರಿ 15, 2020 (www.justkannada.in): ರಾಂಬೋ 2 ಚಿತ್ರದ ‘ಚುಟು ಚುಟು..’ 100 ಮಿಲಿಯನ್ ದಾಟಿದ ಕನ್ನಡದ ಮೊದಲ ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಚುಟು ಚುಟು..’ ‘ರಾಂಬೋ 2’ ಸಿನಿಮಾದ ಹಾಡು. ಅರ್ಜುನ್ ಜನ್ಯ ಹಾಡಿಗೆ ಸಂಗೀತ ನೀಡಿದ್ದಾರೆ. ಅವರ ಕೆರಿಯರ್ ನಲ್ಲಿ ಈ ಹಾಡು ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ.

ಮಾರ್ಚ್ 21, 2018 ರಲ್ಲಿ ಈ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಜಾನಪದ ಸೊಗಡು ಹಾಡಿನಲ್ಲಿದ್ದು, ಉತ್ತರ ಕರ್ನಾಟಕ ಸ್ಟೈಲ್ ಹಾಡಿಗೆ ಫ್ಯಾನ್ಸ್ ಸ್ಟೆಪ್ ಹಾಕಿದ್ದರು.