ಶಿವಣ್ಣನ ಭಜರoಗಿ -2 ಪೋಸ್ಟರ್ ಗಮ್ಮತ್ತೇ ಬೇರೆ !

ಬೆಂಗಳೂರು, ಜನವರಿ 15, 2020 (www.justkannada.in): ಬಹಳಷ್ಟು ನಿರೀಕ್ಷೆಯನ್ನ ಹುಟ್ಟು ಹಾಕಿರುವ ಚಿತ್ರ ಭಜರoಗಿ -2 ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ.

ಸಂಕ್ರಾಂತಿಯ ಸುಗ್ಗಿಯ ದಿನ ಬಿಡುಗಡೆಗೊಂಡಿರುವ ಈ ಪೋಸ್ಟರ್ ಈಗ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

ಎ.ಹರ್ಷ ನಿರ್ದೇಶನ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಹಿಟ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಭಜರಂಗಿ – 2 ಚಿತ್ರದ ಶಿವಣ್ಣ ಅವರ ಬೆಂಕಿ ಲುಕ್ಕಿನ ಪೋಸ್ಟರ್ ಮುಂದೆ ಚಾಣಾಕ್ಷ ಪಂಜು ಹಿಡಿದಿರುವುದು ನೋಡುವುದಕ್ಕೆ ಮೈ ಜುಮ್ಮೆನಿಸುತ್ತದೆ.