ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ‘ರಾಬರ್ಟ್’ ಸೆಕೆಂಡ್ ಲುಕ್ ‘ಎಳ್ಳು ಬೆಲ್ಲ’!

ಬೆಂಗಳೂರು, ಜನವರಿ 15, 2020 (www.justkannada.in): ಸಂಕ್ರಾಂತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಹಬ್ಬದ ದಿನವಾಗಿದೆ.

ರಾಬರ್ಟ್ ಸಿನಿಮಾದ ಎರಡನೇ ಪೋಸ್ಟರ್ ಇಂದು ಬಿಡುಗಡೆಯಾಗಿದ್ದು  ದರ್ಶನ್ ಅಭಿಮಾನಿಗಳಿಗೆ ಹಬ್ಬವಾಗಿದೆ . ಕ್ರಿಸ್ ಮಸ್ ದಿನದಂದು ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು.

ಈ ಫಸ್ಟ್ ಲುಕ್ ನಲ್ಲಿ ದರ್ಶನ್ ಉದ್ದ ಕೂದಲು ಬಿಟ್ಟುಕೊಂಡು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಲುಕ್ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಿದೆ. ರಾಮಲೀಲಾದ ಕೊನೆಯ ಭಾಗದ ಚಿತ್ರಣದೊಂದಿಗೆ ಮೋಷನ್ ಪೋಸ್ಟರ್ ಆರಂಭವಾಗುತ್ತದೆ. ಶ್ರೀರಾಮನ ಹಾಡು ಹಿನ್ನೆಲೆಯಲ್ಲಿ ಕೇಳುತ್ತಿದ್ದು, ಆಂಜನೇಯನ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ರೋಮಾಂಚನಕ್ಕೆ ಕಾರಣವಾಗಿದ್ದಾರೆ.