ಜ.20ರ ನಂತರ  ಸಂಪುಟ ವಿಸ್ತರಣೆ ವಿಶ್ವಾಸವಿದೆ-ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ಶಾಸಕ ಆನಂದ್ ಸಿಂಗ್…

ಬಳ್ಳಾರಿ,ಜ,15,2020(www.justkannada.in): ಉಪಚುನಾವಣೆ ನಡೆದು ತಿಂಗಳು ಕಳೆದಿದ್ದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ತಡವಾಗುತ್ತಿರುವುದಕ್ಕೆ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆ ಈ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಪರ ಬ್ಯಾಟ್ ಬೀಸಿರುವ ಶಾಸಕ ಆನಂದ್ ಸಿಂಗ್, ಜನವರಿ 20ರ ನಂತರ ಸಂಪುಟ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ವಿಜಯ್ ಸಿಂಗ್, ಉಪಚುನಾವಣೆಯಲ್ಲಿ ಗೆದ್ದಿರುವ ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಒಂದಿಷ್ಟು ತಾಂತ್ರಿಕ ತೊಂದರೆ ಇದೆ. ದೇಶದಲ್ಲಿ ಸಿಎಎ ಗಲಾಟೆ ಇದೆ. ಇದನ್ನ ಅರ್ಥ ಮಾಡಿಕೊಳ್ಳಬೇಕು ಸುಮ್ಮನೆ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಒತ್ತಡ ಹಾಕೋದು ಸರಿಯಲ್ಲ ಎಂದರು.

ಜನವರಿ 20ರ ನಂತರ ಸಚಿವ ಸಂಪುಟ ವಿಸ್ತರಣೆಯಾಗುವ ವಿಶ್ವಾಸವಿದೆ. ನಾವೆಲ್ಲರೂ ಸಚಿವರಾಗುವ ವಿಶ್ವಾಸವಿದೆ. ಎಲ್ಲದಕ್ಕೂ ಒಳ್ಳೆಯ ಕಾಲ ಬರಬೇಕು. ನನಗೆ ಮಂತ್ರಿಯಾಗೋದು ಮುಖ್ಯವಲ್ಲ. ವಿಜಯನಗರ ಜಿಲ್ಲೆಯಾಗೋದು ಮುಖ್ಯ ಎಂದು ಆನಂದ್ ಸಿಂಗ್ ತಿಳಿಸಿದರು.

Key words: cabinet expansion – confident -after –jan 20th-MLA Anand Singh