ಬಳ್ಳಾರಿ ಜಿಲ್ಲೆಯಲ್ಲಿ ‘ಕಿಚ್ಚ ಸುದೀಪ್ ನಗರ’ !

ಬೆಂಗಳೂರು, ಜನವರಿ 15, 2020 (www.justkannada.in): ಬಳ್ಳಾರಿ ಜಿಲ್ಲೆಯ ವದ್ದಟ್ಟಿ ಗ್ರಾಮದ ಜನ ಕಿಚ್ಚ ಸುದೀಪ್ ಮೇಲಿನ ಅಭಿಮಾನದಿಂದ ತಮ್ಮ ಗ್ರಾಮಕ್ಕೆ ಕಿಚ್ಚ ಸುದೀಪ್ ನಗರ ಎಂದು ನಾಮಕರಣ ಮಾಡಿದ್ದಾರೆ.

ಗ್ರಾಮದಲ್ಲಿ ಕಿಚ್ಚನ ಫೋಟೋ ಸಮೇತ ನಾಮಫಲಕ ಹಾಕಿದ್ದಾರೆ. ಇದು ಕಿಚ್ಚನ ಗಮನಕ್ಕೂ ಬಂದಿದ್ದು ಅಭಿಮಾನಿಗಳ ಅಭಿಮಾನಕ್ಕೆ ಧನ್ಯವಾದ ತಿಳಿಸಿದ್ದಾರೆ.

ಹಿಂದೊಮ್ಮೆ ಸುದೀಪ್ ಹೆಸರಿನಲ್ಲಿ ಅಭಿಮಾನಿಗಳು ಗ್ರಂಥಾಲಯವೊಂದನ್ನು ತೆರೆದು ಅದಕ್ಕೆ ಅವರದ್ದೇ ಹೆಸರಿಟ್ಟಿದ್ದರು. ಇದೀಗ ಗ್ರಾಮಕ್ಕೇ ಕಿಚ್ಚನ ಹೆಸರಿಡಲಾಗಿದೆ.